ದೆಹಲಿ: 'ವಂದೇ ಮಾತರಂ' ಎಂದ ಯುವತಿಯ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಮಹಿಳೆ
ಶಿಕ್ಷಣ ಸುಧಾರಣೆ ಮತ್ತು SIR ನೆಪದಲ್ಲಿ ಅಭಿಜೀತ್ ದೀಪ್ಕೆ ಹಾಗೂ ಧ್ರುವ್ ರಾಠೀ ಅವರ ಸಿಜೆಪಿ ಪಕ್ಷವು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪವಿದೆ. ಪ್ರತಿಭಟನೆ ವೇಳೆ ವಂದೇ ಮಾತರಂ ಹಾಡಿದ ಯು...
ದೆಹಲಿ: ಭಾರತದ ಅಭಿವೃದ್ಧಿಗಾಗಿ ಮತ್ತು ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನೆಪದಲ್ಲಿ ಅಮೆರಿಕ ಮತ್ತು ಜರ್ಮನಿಯಿಂದ ಆಗಮಿಸಿರುವ ಅಭಿಜೀತ್ ದೀಪ್ಕೆ ಹಾಗೂ ಧ್ರುವ್ ರಾಠೀ ಅವರ ಕಾಕ್ರೋಚ್ ಜನತಾ ಪಕ್ಷ (CJP)ದ ಹಿಂದಿರುವ ಗುರಿ ಏನು ಎಂಬ ಬಗ್ಗೆ ಈಗಾಗಲೇ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಹೇಳಿದ ತಕ್ಷಣ ತಮ್ಮ ಬೆಂಬಲಿಗರನ್ನು ಕರೆದುಕೊಂಡು ವಿಮಾನದ ಐಷಾರಾಮಿ ಕ್ಲಾಸ್ನಲ್ಲಿ ಭಾರತಕ್ಕೆ ಧಾವಿಸಲು ಇವರಿಗೆ ಲಕ್ಷ ಲಕ್ಷ ಹಣದ ಫಂಡಿಂಗ್ ಎಲ್ಲಿಂದ ಸಿಗುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಇವರ ಕಾರ್ಯಸೂಚಿ ಏನು ಎಂಬುದು ಪ್ರಶ್ನೆಯಾಗಿದ್ದು, ಶಿಕ್ಷಣ ಸುಧಾರಣೆಯ ಹೆಸರಿನಲ್ಲಿ ಈಗ SIR ಹೆಸರಿನಲ್ಲಿ ಭಾರತದ ಜೆನ್ ಜೀಗಳನ್ನು ಪ್ರಚೋದಿಸಿ, ನೇಪಾಳ ಅಥವಾ ಫ್ರಾನ್ಸ್ ಮಾದರಿಯಲ್ಲಿ ಇಲ್ಲಿ ಅಶಾಂತಿ ಮೂಡಿಸುವ ವಿಫಲ ಪ್ರಯತ್ನಗಳು ನಡೆಯುತ್ತಿವೆ. ಇವರಿಗೆ ಇಲ್ಲಿ ಅಮಾಯಕರ ಸಾವು ಬೇಕಿದೆ. ಲಾಠಿ ಚಾರ್ಜ್ ಅಥವಾ ಇನ್ಯಾವುದೇ ಘಟನೆಗಳಿಂದ ಒಂದೆರಡು ಸಾವು ಸಂಭವಿಸಿದರೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವವರೆಗೂ ಇವರು ಇಲ್ಲಿಂದ ಹೋಗುವುದಿಲ್ಲ ಎಂಬ ಗಂಭೀರ ಆರೋಪಗಳು ಇವರ ಮೇಲಿವೆ. ಇದಕ್ಕೆ ಪೂರಕವಾಗಿ ದೇಶದ ಒಳಗಿದ್ದುಕೊಂಡು ಇವರಿಗೆ ಬೆಂಬಲ ನೀಡುವವರೂ ಇದ್ದಾರೆ.
ಸಿಜೆಪಿ ಪ್ರತಿಭಟನೆ
ಪ್ರಸ್ತುತ SIR ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು ಸಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಹಿಂದೆ ಇದೇ ನೆಪದಲ್ಲಿ ಪ್ರತಿಭಟನೆ ನಡೆದಾಗ, ಕಲ್ಲು ತೂರಾಟ ನಡೆಸಲು ಕೆಲವರು ಬಂದಿದ್ದರು. ಅರಾಜಕತೆ ಸೃಷ್ಟಿಸಲು ಮತ್ತಷ್ಟು ಮಂದಿ ಸೇರಿದ್ದರು. ಈ ಬಾಹ್ಯ ಶಕ್ತಿಗಳ ಮೂಲವನ್ನು ಗಮನದಲ್ಲಿಟ್ಟುಕೊಂಡೇ ಈ ಬಾರಿ ಅವರಿಗೆ ದೆಹಲಿಯ ಜಂತರ್ಮಂತರ್ನಲ್ಲಿ ಅವಕಾಶ ನೀಡಿರಲಿಲ್ಲ. ಇಷ್ಟಾದರೂ ಈ ಜಿರಳೆಗಳು ಸೃಷ್ಟಿಸಿರುವ ಗೊಂದಲಗಳ ಕುರಿತಾದ ಆಘಾತಕಾರಿ ವಿಡಿಯೋಗಳು ವೈರಲ್ ಆಗುತ್ತಿವೆ.
ಇದೀಗ, ಯುವತಿಯೊಬ್ಬಳು ಯುಟ್ಯೂಬರ್ ಆಗಿ ಈ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದಾಗ, ಲೇಡಿ ಜಿರಳೆಗಳು ಆಕೆಯನ್ನು ಮುತ್ತಿಗೆ ಹಾಕಿ ಬೆದರಿಕೆ ಹಾಕಲು ಆರಂಭಿಸಿದವು. ಆ ಸಂದರ್ಭದಲ್ಲಿ ಈ ಯುವತಿ ವಂದೇ ಮಾತರಂ ಎಂದು ಹಾಡಿದಾಗ, ಹಿಂಬದಿಯಲ್ಲಿದ್ದ ಲೇಡಿ ಕಾಕ್ರೋಚ್ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾಳೆ ಎಂದರೆ, ಪ್ರತಿಭಟನೆಗೆ ಅಂತಹ ವಸ್ತುಗಳನ್ನೂ ತರಲಾಗಿದೆ ಎಂಬುದು ಸ್ಪಷ್ಟವಾಗಿದೆ. ಪುರುಷರು ಕಲ್ಲುಗಳನ್ನು ತಂದರೆ, ಮಹಿಳಾ ಜಿರಳೆಗಳು ಪೆಪ್ಪರ್ ಸ್ಪ್ರೇ ತಂದಿರುವುದು ಈ ಪ್ರತಿಭಟನೆಯ ಹಿಂದಿರುವ ನಿಜವಾದ ಉದ್ದೇಶದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ವಂದೇ ಮಾತರಂ
ಭಾರತದಲ್ಲಿ ನೆಲೆಸಿದ್ದು ವಂದೇ ಮಾತರಂ ಘೋಷಣೆಯನ್ನು ಸಹಿಸಲಾಗದ ಈ ಯುವ ಮನಸ್ಸುಗಳು ನಿಜಕ್ಕೂ ಭಾರತದ ಉದ್ಧಾರಕ್ಕಾಗಿ ಬಂದಿವೆಯೇ? ಇವರಿಗೆ ಶಿಕ್ಷಣದ ಸುಧಾರಣೆ ಅಥವಾ ಮತದಾರರ ಪಟ್ಟಿಯ ಸುಧಾರಣೆ ಬೇಕಿದೆಯೇ ಅಥವಾ ಬೇರೆನಾದರೂ ಉದ್ದೇಶವಿದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿಗೆ ಬಂದಿದ್ದ ಪ್ರತಿಭಟನಾಕಾರರನ್ನು ಮಾಧ್ಯಮಗಳು ಸಂದರ್ಶಿಸಿದಾಗ, ಪ್ರತಿಭಟನೆಗೆ ಬಂದರೆ ನಿವೇಶನ ಕೊಡಿಸುತ್ತೇವೆ ಎಂದು ಹೇಳಿದ್ದರಿಂದ ಬಂದಿದ್ದೇವೆ ಎಂದಿದ್ದರು. ತಾವೇಕೆ ಬಂದಿದ್ದೇವೆ ಎಂಬ ಅರಿವೇ ಅವರಿಗಿಲ್ಲದ ಮೇಲೆ, ಇವರ ಉದ್ದೇಶವೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.


