ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಅಪರಾಧ

ಬೆಂಗಳೂರು: 600 ರೂಪಾಯಿಗಾಗಿ ಮೊಬೈಲ್ ಅಡ ಇಟ್ಟ ವಿಚಾರದಲ್ಲಿ ವ್ಯಕ್ತಿಯ ಕೊಲೆ

ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಬಳಿ 600 ರೂಪಾಯಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೊಲೆಯಾದ ವ್ಯಕ್ತಿಯ ಬಳಿ ಮೊಬೈಲ್​​ ಅಡ ಇಟ...

· ಬೆಂಗಳೂರು ನಗರ
600 ರೂಪಾಯಿ‌ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ: ಆರೋಪಿ ಅರೆಸ್ಟ್​​
ಹಂಚಿಕೊಳ್ಳಿ:

ಬೆಂಗಳೂರು, ಅಕ್ಟೋಬರ್​​ 11: 600 ರೂಪಾಯಿ‌ಯ ವಿಷಯವಾಗಿ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಮುಕ್ತಾಯವಾಗಿರುವ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಹತ್ತಿರ ಸಂಭವಿಸಿದೆ. ಮಂಜು ಅಲಿಯಾಸ್ ಕೋಳಿ ಮಂಜು ಮೃತಪಟ್ಟ ವ್ಯಕ್ತಿಯಾಗಿದ್ದು, ಪಳನಿ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಅನೇಕ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಮಂಜು ಮತ್ತು ಪಳನಿ ನಡುವೆ ನಿನ್ನೆ ರಾತ್ರಿ ಬಾರ್​​ ಸಮೀಪ ಉಂಟಾದ ವಾಗ್ವಾದ ತಾರಕಕ್ಕೇರಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿ‌.ಕೆ.ಅಚ್ಚಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಸಲುವಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮಂಜು ಬಳಿ ಮೊಬೈಲ್​​ ಅಡ ಇಟ್ಟಿದ್ದ ಪಳನಿ

ಗಾರೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಮಂಜು ಬಳಿ ಆರೋಪಿ ಪಳನಿ, ತನ್ನ ಮೊಬೈಲನ್ನ ಅಡಮಾನ ಇರಿಸಿದ್ದ. ಮದ್ಯಪಾನ ಮಾಡಲು ಹಣದ ಅಗತ್ಯವಿದ್ದ ಕಾರಣಕ್ಕೆ ಮೊಬೈಲ್​​ ಅಡವಿಟ್ಟು ಹಣ ಪಡೆದಿದ್ದ. ನಿನ್ನೆ ತಡರಾತ್ರಿ ಮೊಬೈಲ್ ಮರಳಿ ನೀಡುವಂತೆ ಮಂಜುಗೆ ಪಳನಿ ಬೆದರಿಕೆ ಹಾಕಿದ್ದು, ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಮಂಜನ ಮೇಲೆ ಹಲ್ಲೆ ನಡೆಸಿದ್ದ. ದೊಣ್ಣೆಯಿಂದ ತಲೆಯ ಭಾಗಕ್ಕೆ ಪಳನಿ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡ ಮಂಜು ಮೃತಪಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮೇಲೆ ಹಲ್ಲೆ: 12 ಜನರ ವಿರುದ್ಧ ದೂರು

ಜಗಳ ಬಿಡಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ, ನಿಂದನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ PSI ಕೆ.ಎಸ್​.ಶೋಭಾರಾಣಿ ನ್ಯಾಮತಿ ಠಾಣೆ ಸಿಪಿಐಗೆ ದೂರು ನೀಡಿದ್ದು, ಅದರ ಪ್ರಕಾರ 12 ಜನರ ವಿರುದ್ಧ ಪೊಲೀಸರು ಕಂಪ್ಲೇಟ್​​ ದಾಖಲಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ಸೋಗಿಲು ಗ್ರಾಮದಲ್ಲಿ ಜಾಗದ ವಿಚಾರವಾಗಿ 2 ಗುಂಪುಗಳ ನಡುವೆ ಕಳೆದ ಶುಕ್ರವಾರ ಗಲಾಟೆ ನಡೆದಿತ್ತು. ಈ ವೇಳೆ ಜಗಳ ತಡೆಯಲು ಹೋದ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ನಡೆಸಿ ನಿಂದಿಸಿದ್ದರು ಎಂದು ದೂರಲಾಗಿತ್ತು. ಆದ್ದರಿಂದ ಅಣ್ಣಪ್ಪ, ಸಂಜು, ಮಂಜಪ್ಪ, ಬಸವರಾಜ್, ಹನುಮಂತಪ್ಪ, ಶಿವು, ಸುನೀಲ್, ಪ್ರದೀಪ್, ಮಹಾಲಕ್ಷ್ಮೀ, ಹಾಲೇಶ್ ಮಲ್ಲಮ್ಮ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮತ್ತು ನಿಂದನೆ ಆರೋಪದಡಿ ನ್ಯಾಮತಿ ಪೊಲೀಸ್​​​​ ಠಾಣೆಯಲ್ಲೀಗ ದೂರು ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಹಂಚಿಕೊಳ್ಳಿ: