ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಅಪರಾಧ

ಅಭಿಜೀತ್ ದೀಪ್ಕೆ: ಪೊಲೀಸರ ವಿರುದ್ಧ ಸುಳ್ಳು ಆರೋಪ, ವಿಡಿಯೋ ಬಿಡುಗಡೆ ಮಾಡಿ ಬಣ್ಣ ಬಯಲು ಮಾಡಿದ ದೆಹಲಿ ಪೊಲೀಸರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಅಜ್ಜಿಯ ನಿಧನದ ಬಗ್ಗೆ ದೆಹಲಿ ಪೊಲೀಸರು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ದೆಹಲಿ ಪೊಲೀಸರು ಘಟನೆಯ ನೈಜ ವಿಡಿಯೋ ಬಿಡುಗಡೆ ಮಾಡುವ ಮೂಲಕ ದೀಪ್ಕೆ...

ಹಂಚಿಕೊಳ್ಳಿ:

ದೆಹಲಿ: ಕಾಕ್ರೋಚ್​ ಜನತಾ ಪಕ್ಷ (CJP) ಸ್ಥಾಪಕ ಅಭಿಜೀತ್​ ದೀಪ್ಕೆ ದೆಹಲಿ ಪೊಲೀಸರ ಮೇಲೆ ಗಂಭೀರವಾಗಿ ದೂರಿ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸತ್ಯಕ್ಕೆ ವಿರುದ್ಧವಾಗಿ ಪೊಲೀಸರ ಮೇಲೆ ಅವರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಆದರೆ ಇವರ ಇರಾದೆಯನ್ನು ಮೊದಲೇ ಗ್ರಹಿಸಿದ್ದ ದೆಹಲಿ ಪೊಲೀಸರು, ಪ್ರತಿ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದು, ಅದನ್ನು ಬಿಡುಗಡೆ ಮಾಡುವ ಮೂಲಕ ದೀಪ್ಕೆಯ ನಾಟಕಕ್ಕೆ ಬ್ರೇಕ್ ಹಾಕಿದ್ದಾರೆ. ವಾಸ್ತವ ಏನೆಂಬುದನ್ನು ವಿಡಿಯೋ ಮೂಲಕ ಹೊರಹಾಕಿದ್ದರಿಂದ ನೆಟ್ಟಿಗರು ದೀಪ್ಕೆಯ ಪೋಸ್ಟ್​ಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ದೀಪ್ಕೆ ಪೋಸ್ಟ್​ನಲ್ಲಿ ಹಾಕಿದ್ದೇನು

ದೆಹಲಿಯ ಜಂತರ್​ಮಂತರ್​ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅಭಿಜೀತ್​ ದೀಪ್ಕೆ ಅವರ ಅಜ್ಜಿ ನಿಧನರಾದರು. ಆ ವಿಷಯವನ್ನು ತಮಗೆ ತಿಳಿಸಲೇ ಇಲ್ಲ ಎಂದು ಜನರಲ್ಲಿ ಸಹಾನುಭೂತಿ ಮೂಡಿಸುವ ರೀತಿಯಲ್ಲಿ ದೀಪ್ಕೆ ಪೋಸ್ಟ್ ಹಾಕಿದ್ದಾರೆ. ತಮ್ಮ ಸೋದರಸಂಬಂಧಿಯೊಂದಿಗೆ ಮಾತನಾಡಲು ಪೊಲೀಸರು ಬಿಡಲಿಲ್ಲ ಎಂದು ಅವರು ಇದರಲ್ಲಿ ದೂಷಿಸಿದ್ದಾರೆ. "ನನ್ನ ಅಜ್ಜಿಯ ಜೊತೆಗಿದ್ದ ಸೋದರಸಂಬಂಧಿಗೆ ಕರೆ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದೆ. ಕನಿಷ್ಠ ನನ್ನ ಸೋದರಸಂಬಂಧಿಯ ಸಂಖ್ಯೆಯನ್ನು ಪಡೆಯಲು ಕೇವಲ ಒಂದೆರಡು ನಿಮಿಷಗಳ ಕಾಲ ಫೋನ್ ಕೇಳಿದ್ದೆ. ದೆಹಲಿ ಪೊಲೀಸರು ನನ್ನ ಫೋನ್ ಬಳಸಲು ಏಕೆ ಅನುಮತಿ ನೀಡಲಿಲ್ಲ? ನಾನು ವಕೀಲರಿಗೆ ಕರೆ ಮಾಡಲು ಸಹ ಕೋರಿದ್ದೆ, ಅದನ್ನೂ ನಿರಾಕರಿಸಲಾಯಿತು" ಎಂದು ಅವರು X ನಲ್ಲಿ ಬರೆದಿದ್ದಾರೆ.

ವಿಡಿಯೋ ರಿಲೀಸ್​: ಸಿಕ್ಕಿಬಿದ್ದ ದೀಪ್ಕೆ

"ಬೆಳಿಗ್ಗೆ 3:30 ಕ್ಕೆ, ದೆಹಲಿ ಪೊಲೀಸರು ನನ್ನ ತಂದೆಗೆ ಕರೆ ಮಾಡಿ ನಾಳೆ ನಾನು ದೀರ್ಘಕಾಲ ಜೈಲಿಗೆ ಹೋಗುತ್ತೇನೆ ಎಂದು ಹೇಳಲು ತಿಳಿಸಿದರು. ಅಜ್ಜಿಯನ್ನು ಕಳೆದುಕೊಂಡಿದ್ದ ಅದೇ ತಂದೆಗೆ ಅವರು ಕರೆ ಮಾಡಿದ್ದರು. ನಾವು ಈಗಾಗಲೇ ಅಜ್ಜಿಯನ್ನು ಕಳೆದುಕೊಂಡಿದ್ದೇವೆ, ಇನ್ನು ಎಷ್ಟು ಆಘಾತವನ್ನು ನನ್ನ ಕುಟುಂಬಕ್ಕೆ ನೀಡಲು ಬಯಸುತ್ತೀರಿ ಎಂದು ಅವರು ಎಕ್ಸ್​ನಲ್ಲಿ ಆರೋಪಿಸಿದ್ದಾರೆ. ಆದರೆ ಅಜ್ಜಿ ಮೃತಪಟ್ಟ ವಿಷಯವನ್ನು ದೆಹಲಿ ಪೊಲೀಸರು ಆರಾಮಾಗಿ ಕುಳಿತಿದ್ದ ದೀಪ್ಕೆಗೆ ಎಷ್ಟು ಸೌಜನ್ಯದಿಂದ ತಿಳಿಸಿದ್ದರು ಎಂಬುದನ್ನು ವಿಡಿಯೋ ಮೂಲಕ ಬಿಡುಗಡೆ ಮಾಡಿ ದೀಪ್ಕೆಯ ಸುಳ್ಳಿನ ಕಂತೆಗೆ ಪೊಲೀಸರು ತೆರೆ ಎಳೆದಿದ್ದಾರೆ!

ವೈರಲ್​ ಆಗಿರುವ ವಿಡಿಯೋದಲ್ಲಿ ಮೊದಲು ಮಹಿಳಾ ಪೊಲೀಸ್ ಅಧಿಕಾರಿ ದೀಪ್ಕೆ ಬಳಿ ಬಂದು ಮರಣದ ಸುದ್ದಿಯನ್ನು ತಿಳಿಸುತ್ತಾರೆ. ಆ ಬಳಿಕ ಪೊಲೀಸರೇ ಬಂದು ಸಾವಿನ ಸುದ್ದಿಯನ್ನು ಹೇಗೆ ಹೇಳಬೇಕೋ ಆ ನೋವಿನಲ್ಲೇ ತಿಳಿಸಿದ್ದು, ಅದನ್ನು ಕೇಳಿ ದೀಪ್ಕೆ ಒಂದು ಕ್ಷಣ ಗಲಿಬಿಲಿಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ದೀಪ್ಕೆ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದು ಬೇರೆಯೇ ವಿಷಯ. ಪೊಲೀಸರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಹೇಳಿ ಈಗ ದೀಪ್ಕೆ ಸಿಕ್ಕಿಬಿದ್ದಿದ್ದಾರೆ.

View this post on Instagram

ಹಂಚಿಕೊಳ್ಳಿ: