ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಅಪರಾಧ

ಅಭಿಜೀತ್ ದೀಪ್ಕೆ: ಬಿಜೆಪಿ ಮತ್ತು RSS ಅನ್ನು ದೇಶದಿಂದ ಹೊರಹಾಕುವುದೇ ನನ್ನ ಗುರಿ ಎಂದ CJP ಸ್ಥಾಪಕ

ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆಯ ನಾಲ್ಕು ತಿಂಗಳ ಹಿಂದಿನ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಅವರು ಭಾರತದಲ್ಲಿ ಬಿಜೆಪಿ ಮತ್ತು RSS ಅನ್ನು ಓಡಿಸುವುದೇ ತಮ್ಮ ಏಕೈಕ ಉದ್ದೇಶ ಎಂದು ಹೇಳಿಕೊಂ...

ಹಂಚಿಕೊಳ್ಳಿ:

ದೆಹಲಿ: ಅಮೆರಿಕದಲ್ಲಿ ವಾಸವಾಗಿರುವ ಅಭಿಜೀತ್​ ದೀಪ್ಕೆ, ಕಾಕ್ರೋಚ್​ ಜನತಾ ಪಕ್ಷ (CJP) ಸ್ಥಾಪಿಸಿ ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ನೆರೆಯ ರಾಷ್ಟ್ರಗಳ ಮಾದರಿಯಲ್ಲಿ Gen Zಗಳನ್ನು ಪ್ರಚೋದಿಸಿ ದೇಶದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಾಲ್ಕು ತಿಂಗಳ ಹಿಂದಿನ ವಿಡಿಯೋ ಒಂದು ಸೋರಿಕೆಯಾಗಿದ್ದು, ಇದು ಬಿಜೆಪಿ ನಾಯಕರು ಮತ್ತು ಬಿಜೆಪಿ ಬೆಂಬಲಿಗರ ಆರೋಪಗಳಿಗೆ ಹೆಚ್ಚಿನ ಬಲ ತುಂಬಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಶಿಕ್ಷಣ ಸುಧಾರಣೆಯ ಹೆಸರಿನಲ್ಲಿ, ಸದ್ಯ SIR ನೆಪದಲ್ಲಿ ದೀಪ್ಕೆ ಹಾಗೂ ಯುಟ್ಯೂಬರ್​ ಧ್ರುವ್​ ರಾಠಿಯಂಥವರು ಭಾರತಕ್ಕೆ ಬಂದಿರುವ ಹಿಂದಿನ ಅಸಲಿ ಉದ್ದೇಶ ಸ್ಪಷ್ಟವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಅಭಿಜೀತ್​ ದೀಪ್ಕೆ ನಾಲ್ಕು ತಿಂಗಳ ಹಿಂದೆ Arfa Khanum Sherwani ಅವರ ಯುಟ್ಯೂಬ್​ ಚಾನೆಲ್​ಗೆ ಸಂದರ್ಶನ ನೀಡಿದ್ದರು. ಆ ಸಮಯದಲ್ಲಿ ಕಾಕ್ರೋಚ್​ ಜನತಾ ಪಕ್ಷವು ಹೊಸದಾಗಿ ಉದಯವಾಗಿತ್ತೇ ಹೊರತು, ಅದರ ಬಗ್ಗೆ ಹೆಚ್ಚಿನ ಪ್ರಚಾರವಿರಲಿಲ್ಲ ಹಾಗೂ ಅವರು ಯಾವುದೇ ಪ್ರತಿಭಟನೆಯನ್ನು ಕೈಗೊಂಡಿರಲಿಲ್ಲ. ಆ ಸಂದರ್ಭದಲ್ಲಿ ಪತ್ರಕರ್ತೆ ಅವರ ಗುರಿಯ ಬಗ್ಗೆ ಪ್ರಶ್ನಿಸಿದಾಗ, ದೀಪ್ಕೆ ನೀಡಿದ ಉತ್ತರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದ ಅಭಿವೃದ್ಧಿಯಲ್ಲ, ಬದಲಾಗಿ ಬಿಜೆಪಿ ಮತ್ತು RSS ವಿರುದ್ಧ ಹೋರಾಡುವುದೇ ತಮ್ಮ ಗುರಿ ಎನ್ನುವ ಅರ್ಥದಲ್ಲಿ ಅವರು ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ನನ್ನ ಏಕೈಕ ಉದ್ದೇಶವೆಂದರೆ...

ಈ ವಿಡಿಯೋದಲ್ಲಿ ದೀಪ್ಕೆ, ಭಾರತದಲ್ಲಿ ಬಿಜೆಪಿ ಮತ್ತು RSS ಇರಬಾರದು ಎಂಬುದೇ ನನ್ನ ಏಕೈಕ ಉದ್ದೇಶ ಎಂದು ಹೇಳಿದ್ದಾರೆ. ನಾನು AAP ಬೆಂಬಲಿಗನಾಗಿದ್ದು, ಬಿಜೆಪಿಯನ್ನು ದೇಶದಿಂದ ಹೊರಹಾಕುವುದೇ ನನ್ನ ಗುರಿ ಎಂದು ತಿಳಿಸಿದ್ದಾರೆ. ಕಳೆದ 15 ವರ್ಷಗಳಿಂದ ಬೇರೆ ಬೇರೆ ರೀತಿಯಲ್ಲಿ ಈ ಕೆಲಸವನ್ನು ಮಾಡುತ್ತಿದ್ದರೂ ಅದು ಅಷ್ಟಾಗಿ ಯಶಸ್ವಿಯಾಗಿರಲಿಲ್ಲ. ಆದರೆ ಈಗ ತಮಾಷೆಯಾಗಿ ಆರಂಭವಾದ ಕಾಕ್ರೋಚ್​ ಜನತಾ ಪಕ್ಷ (CJP) ಈ ಗುರಿಯನ್ನು ಸಾಧಿಸಲು ನನಗೆ ವೇದಿಕೆ ಒದಗಿಸಿದೆ. ಇದನ್ನು ಬಳಸಿಕೊಂಡು ನಾನು ಬಿಜೆಪಿಯನ್ನು ಓಡಿಸುತ್ತೇನೆ, ಇದೇ ನನ್ನ ಎಜೆಂಡಾ ಎಂದು ಅವರು ಹೇಳಿಕೊಂಡಿದ್ದಾರೆ.

ನನ್ನ ಇತಿಹಾಸ ನೋಡಿ

ನೀವು ನನ್ನ 15 ವರ್ಷಗಳ ಯುಟ್ಯೂಬ್​ ಇತಿಹಾಸವನ್ನು ಪರಿಶೀಲಿಸಬಹುದು. ಬಿಜೆಪಿ ಮತ್ತು ಆರ್​ಎಸ್​ಎಸ್​ ಅನ್ನು ಟೀಕಿಸದ ಒಂದೇ ಒಂದು ವಿಡಿಯೋ ಅಲ್ಲಿ ಸಿಗುವುದಿಲ್ಲ. ನಾನು ಕಾಂಗ್ರೆಸ್​ ಪರವಾಗಿರುವವನು. ನನ್ನ ಇತಿಹಾಸವನ್ನು ಗಮನಿಸಿದರೆ ನಿಮಗೆ ವಿಷಯ ಅರ್ಥವಾಗುತ್ತದೆ. ಕಳೆದ 15 ವರ್ಷಗಳಿಂದ ಇದನ್ನೇ ಮಾಡುತ್ತಾ ಬಂದಿದ್ದೇನೆ, ಮುಂದೆಯೂ ಇದನ್ನೇ ಮುಂದುವರಿಸುತ್ತೇನೆ ಎಂದು ದೀಪ್ಕೆ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.

ನಂತರದ ದಿನಗಳಲ್ಲಿ ನೀಟ್​ ಪರೀಕ್ಷೆ ಸೋರಿಕೆಯ ನೆಪದಲ್ಲಿ ನಡೆದ ಗಲಭೆ, ಹಿಂಸಾಚಾರ ಹಾಗೂ ಸದ್ಯ SIR ನೆಪದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಎಲ್ಲರ ಕಣ್ಣಮುಂದಿವೆ. ಬಹುಶಃ ಇಂತಹ ಬೆಳವಣಿಗೆಗಳು ನಡೆಯುತ್ತವೆ ಎಂದು ತಿಳಿದಿದ್ದರೆ, ಅಂದು ದೀಪ್ಕೆ ಅಷ್ಟು ಮುಕ್ತವಾಗಿ ತಮ್ಮ ವಿಚಾರಗಳನ್ನು ಹಾಗೂ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಿರಲಿಲ್ಲವೇನೋ. ಆದರೆ ಈಗ ಎಲ್ಲವೂ ಸ್ಪಷ್ಟವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕಾಮೆಂಟ್​ ಮಾಡುತ್ತಿದ್ದಾರೆ.

ಹಂಚಿಕೊಳ್ಳಿ: