ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಸ್ಟಿಂಗ್ ಆಪರೇಷನ್ ಕೇಸ್ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಿ: ಛಲವಾದಿ

ಬೆಂಗಳೂರು: ಸ್ಟಿಂಗ್ ಆಪರೇಷನ್ ಬಗ್ಗೆ ಬಿಜೆಪಿ ನಾಯಕರು ದೂರು ಕೊಡಲಿ ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿರುಗೇಟು...

· ಬೆಂಗಳೂರು ನಗರ
ಸ್ಟಿಂಗ್ ಆಪರೇಷನ್ ಕೇಸ್ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಿ: ಛಲವಾದಿ
ಹಂಚಿಕೊಳ್ಳಿ:

ಬೆಂಗಳೂರು: ಸ್ಟಿಂಗ್ ಆಪರೇಷನ್ ಬಗ್ಗೆ ಬಿಜೆಪಿ ನಾಯಕರು ದೂರು ಕೊಡಲಿ ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಅವರು, ಪ್ರಿಯಾಂಕ್ ಖರ್ಗೆ ಮೊದಲು ಕಾನೂನು ತಿಳಿದುಕೊಳ್ಳಲಿ. ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಿ. ದೂರು ಕೊಟ್ಟೇ ತನಿಖೆ ಮಾಡಬೇಕು ಅಂತಾ ಇಲ್ಲ. ಅನ್ಯ ಮಾರ್ಗಗಳನ್ನು ಅನುಸರಿಸದವರು ಭಯ ಪಡಬೇಕಾಗಿಲ್ಲ. ಕುಂಬಳಕಾಯಿ ಕಳ್ಳರ ರೀತಿಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ತನಿಖೆ ಮಾಡಬೇಕಾದ ಮುಖ್ಯಮಂತ್ರಿಗಳೇ ಯಾಕೆ ಇದನ್ನು ಹರಿಬಿಟ್ಟರು? ಅಂತ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಿಕೊಂಡು, ಸ್ಟಿಂಗ್ ಆಪರೇಷನ್ ಕೇಸ್ ಬಗ್ಗೆ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

 

ಹಂಚಿಕೊಳ್ಳಿ: