ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಕಾವೂರು | ಅನೈತಿಕ ಸಂಬಂಧ ಶಂಕೆ: ಪತ್ನಿಯ ಕೊಲೆ

ಮಂಗಳೂರು: ನಗರದ ಕಾವೂರು ಠಾಣೆಯ ವ್ಯಾಪ್ತಿಯಲ್ಲಿರುವ ಉರುಂದಾಡಿಗುಡ್ಡೆ ಎಂಬಲ್ಲಿ ಮಹಿಳೆಯಿಬ್ಬರು ಕೊಲೆಯಾಗಿದ್ದಾರೆ. ಪರಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಪತಿಯೇ ಭಾನುವಾರ ರಾತ್ರಿ ಇರಿದು ಕೊಲ...

· ದಕ್ಷಿಣ ಕನ್ನಡ
ಕಾವೂರು | ಅನೈತಿಕ ಸಂಬಂಧ ಶಂಕೆ: ಪತ್ನಿಯ ಕೊಲೆ
ಹಂಚಿಕೊಳ್ಳಿ:

ಮಂಗಳೂರು: ನಗರದ ಕಾವೂರು ಠಾಣೆಯ ವ್ಯಾಪ್ತಿಯಲ್ಲಿರುವ ಉರುಂದಾಡಿಗುಡ್ಡೆ ಎಂಬಲ್ಲಿ ಮಹಿಳೆಯಿಬ್ಬರು ಕೊಲೆಯಾಗಿದ್ದಾರೆ. ಪರಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಪತಿಯೇ ಭಾನುವಾರ ರಾತ್ರಿ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜಾಪುರ‌ ಜಿಲ್ಲೆಯ ಸೊನಾಲಿ (30) ಕೊಲೆಯಾದ ಮಹಿಳೆ. ಆಕೆಯ ಪತಿ ಶಿವಲಿಂಗಪ್ಪ ಮಾದರ (40) ಕೊಲೆ ಆರೋಪಿ. ದಂಪತಿ ಕಾವೂರು ಉರುಂದಾಡಿ ಗುಡ್ಡೆಯ ಹರೀಶ್ ಕುಮಾರ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ನಿ ಸೊನಾಲಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಗಂಡನಿಗೆ ಸಂಶಯ ಇತ್ತು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಭಾನುವಾರ ರಾತ್ರಿಯೂ ಗಂಡ- ಹೆಂಡತಿ ಜಗಳ‌ವಾಡಿದ್ದರು. ಈ ವೇಳೆ ಆರೋಪಿ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಗೆ ಇರಿದಿದ್ದ. ಚೂರಿ ಇರಿತದಿಂದ ಸೋನಾಲಿ ಕುತ್ತಿಗೆಗೆ ಗಂಭೀರವಾದ ಗಾಯವಾಗಿತ್ತು. ತೀವ್ರ ರಕ್ತ ಸ್ರಾವದಿಂದ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದು ಅವರು ಸದ್ಯ ಶಿವಲಿಂಗಪ್ಪ ಅವರ ಸಹೋದರಿಯ ಮನೆಯಲ್ಲಿದ್ದಾರೆ ಎಂದು ಗೊತ್ತಾಗಿದೆ.

ಹಂಚಿಕೊಳ್ಳಿ: