ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಶಿವಮೊಗ್ಗ ದಸರಾ: ವಂದೇ ಮಾತರಂ ಪೂರ್ಣ ಹಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೊರನಡೆದ ಕಾಂಗ್ರೆಸ್ ಮುಖಂಡರು

– ಕಾಂಗ್ರೆಸ್‌ ಮುಖಂಡರಿಂದ ದಸರಾ ಕಾರ್ಯಕ್ರಮ ಬಹಿಷ್ಕಾರ ಶಿವಮೊಗ್ಗ: ಜಿಲ್ಲೆಯಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮದ ವೇಳೆ ವಂದೇ ಮಾತರಂ (Vande Mataram) ಗೊಂದಲ ಉಂಟಾಗಿದೆ. ವಂದೇ ಮಾತರಂ ಪೂರ್ಣ ಹಾಡು ಹಾಡಿದ್ದಕ್ಕೆ ಕಾಂಗ್...

· ಶಿವಮೊಗ್ಗ
ಶಿವಮೊಗ್ಗ ದಸರಾದಲ್ಲೂ `ವಂದೇ ಮಾತರಂ’ ಗೊಂದಲ – ಪೂರ್ಣ ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರ ಆಕ್ಷೇಪ!
ಹಂಚಿಕೊಳ್ಳಿ:

– ದಸರಾ ಕಾರ್ಯಕ್ರಮದಿಂದ ದೂರ ಸರಿದ ಕಾಂಗ್ರೆಸ್‌ ಮುಖಂಡರು

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆಯುತ್ತಿದ್ದ ದಸರಾ ಮಹೋತ್ಸವದ ವೇದಿಕೆಯಲ್ಲಿ ವಂದೇ ಮಾತರಂ (Vande Mataram) ಗೀತೆಯ ವಿಷಯವಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವಂದೇ ಮಾತರಂ ಗೀತೆಯನ್ನು ಪೂರ್ತಿಯಾಗಿ ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರು (Congress leaders) ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ದಸರಾ ಕಾರ್ಯಕ್ರಮದ (Shivamogga Dasara) ವೇದಿಕೆಯಲ್ಲೇ ಕಾಂಗ್ರೆಸ್ ಮುಖಂಡರು ಆಕ್ಷೇಪಣೆ ಸಲ್ಲಿಸಿದ್ದು, ದಸರಾ ಕಾರ್ಯಕ್ರಮವನ್ನು ನೀವೇ ನಡೆಸಿಕೊಳ್ಳಿ, ಅದು ಸುಗಮವಾಗಿ ನಡೆಯಲಿ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಕಾರ್ಯಕ್ರಮದ ಪ್ರಾರಂಭದಲ್ಲಿ ಗಾಯಕರು ಸಂಗೀತದೊಂದಿಗೆ ವಂದೇ ಮಾತರಂ ಗೀತೆಯ 2 ಚರಣಗಳನ್ನು ಹಾಡಿದರು. 2 ಚರಣಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಸಂಗೀತ ನಿಂತು ಹೋಗಿತ್ತು. ಸಂಗೀತ ಸ್ಥಗಿತಗೊಂಡ ನಂತರವೂ ಗಾಯಕರು ವಂದೇ ಮಾತರಂ ಗೀತೆಯನ್ನು ಪೂರ್ಣಗೊಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ ಯೋಗೀಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜೆ.ಮಧುಸೂದನ್, ಜವಳಿ- ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಅವರ ನೇತೃತ್ವದ ತಂಡವು ಸ್ಥಳದಿಂದ ಹೊರನಡೆದಿದೆ.

ಪಾಲಿಕೆಯ ಮಾಜಿ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದವರು ದಸರಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ: