ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಮುನಿಯಾಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ. ವಿದ್ಯಾರ್ಥಿ ವೇತನ –  ಧನ ಸಹಾಯ ವಿತರಣೆ.

ಮುನಿಯಾಲು : ಮುನಿಯಾಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವ...

· ಉಡುಪಿ
ಮುನಿಯಾಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ.  ವಿದ್ಯಾರ್ಥಿ ವೇತನ –  ಧನ ಸಹಾಯ ವಿತರಣೆ.
ಹಂಚಿಕೊಳ್ಳಿ:

ಮುನಿಯಾಲು : ಮುನಿಯಾಲು ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಿತು.

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಇತ್ತೀಚೆಗೆ ನಿಧನರಾದ ಸಂಘದ ಕಾರ್ಯದರ್ಶಿ ಸಂತೋಷ ನಾಯ್ಕ್ ಪತ್ನಿ ರಕ್ಷಿತಾ ಅವರಿಗೆ ಸಂಘದ ವತಿಯಿಂದ ಮತ್ತು ಕಾನೂನು ಸಲಹೆಗಾರ ಭರತ್ ಕುಮಾರ್ ಶೆಟ್ಟಿ ಅವರಿಂದ ಧನ ಸಹಾಯ ಮಾಡಲಾಯಿತು.

ಹೆಬ್ರಿ ತಾಲ್ಲೂಕು ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಭಾಕರ ಪೂಜಾರಿ ಕುಚ್ಚೂರು, ಕಾರ್ಯದರ್ಶಿ ಪ್ರವೀಣ್ ಪೂಜಾರಿ ಉಪ್ಪಳ, ಕಾನೂನು ಸಲಹೆಗಾರ ಭರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಆದರ್ಶ್ ಕಾಂಚನ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಸುಕೇಶ್ ಶೆಟ್ಟಿ ವಾರದಿ ವಾಚಿಸಿದರು. ಕೋಶಾಧಿಕಾರಿ ದಿನೇಶ್ ನಾಯ್ಕ್ ವಾರ್ಷಿಕ ಲೆಕ್ಕಚಾರ ಮಂಡನೆ ಮಾಡಿ ವಂದಿಸಿದರು.

 

ಹಂಚಿಕೊಳ್ಳಿ: