ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ 55 ನೇ ವರ್ಷದ ಶರನ್ನವರಾತ್ರಿ ಮಹೋತ್ಸವ.
ಮುದ್ರಾಡಿ : ಮುದ್ರಾಡಿ ನಾಟ್ಕದೂರು ಶ್ರೀ ಅಭಯಹಸ್ತೆ ಆದಿಶಕ್ತಿ ಮತ್ತು ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಧರ್ಮದೈವಗಳು, ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಅಕ್ಟೋಬರ್ ೨೧ ರ ತನಕ ವೈಭವದಿಂದ ನಡೆಯುವ 55ನೇ ವರ್ಷದ ಶರನ್...

ಮುದ್ರಾಡಿ : ಮುದ್ರಾಡಿ ನಾಟ್ಕದೂರು ಶ್ರೀ ಅಭಯಹಸ್ತೆ ಆದಿಶಕ್ತಿ ಮತ್ತು ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಧರ್ಮದೈವಗಳು, ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಅಕ್ಟೋಬರ್ ೨೧ ರ ತನಕ ವೈಭವದಿಂದ ನಡೆಯುವ 55ನೇ ವರ್ಷದ ಶರನ್ನವರಾತ್ರಿ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಭಜನೆಯ ಮೂಲಕ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಗಳು ಆರಂಭಗೊಂಡಿತು.
ಪೀಠಾರೋಹಣದ ಧಾರ್ಮಿಕ ಪೂಜೆ : ಮುದ್ರಾಡಿ ಶ್ರೀಕ್ಷೇತ್ರದ ಸಂಸ್ಥಾಪಕ ಧರ್ಮಯೋಗಿ ಮೋಹನ್ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಿಜಯಕೀರ್ತಿ ಶ್ರೀ ಧರ್ಮಯೋಗಿ ಸುಕುಮಾರ್‌ಮೋಹನ್ ಅವರ ಪಂಚಮ ವರ್ಷದ ಪೀಠಾರೋಹಣದ ಧಾರ್ಮಿಕ ಕಾರ್ಯಕ್ರಮ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಿತು.
ಭಾನುವಾರ ಉದಯಕಾಲದಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಹೋಮ ಶ್ರೀಸತ್ಯನಾರಾಯಣ ಪೂಜೆ, ನಂದಿಕೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಚಂಡಿಕಾಹೋಮ, ಮಧ್ಯಾಹ್ನ ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಭಜನೆ, ರಂಗಪೂಜೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪ್ರತಿ ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಚಂಡಿಕಾಹೋಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನವೂ ಸಂಜೆ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
21 ರಂದು ಸಂಜೆ 7
ರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್‌ಮೋಹನ್ ತಿಳಿಸಿದ್ದಾರೆ.




