ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಮಡಿಕೇರಿ ದಸರಾ: ಮೆರವಣಿಗೆಯಲ್ಲಿ ಡಿಜೆ ಬಳಸಲು ಅನುಮತಿ ಕೋರಿ ಹೈಕೋರ್ಟ್‌ಗೆ ದಶಮಂಟಪ ಸಮಿತಿ ಅರ್ಜಿ

ಮಡಿಕೇರಿ: ಕೊಡಗು ಜಿಲ್ಲೆಯ ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ವಿಜಯದಶಮಿಯಂದು ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಕೋರಿ ದಸರಾ ದಶಮಂಟಪ ಸಮಿತಿ (Madike...

· ಕೊಡಗು
ಮಡಿಕೇರಿ ದಸರಾ ಉತ್ಸವ ಮೆರವಣಿಗೆಗೆ ಡಿಜೆ ಬಳಕೆ – ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದಶಮಂಟಪ ಸಮಿತಿ
ಹಂಚಿಕೊಳ್ಳಿ:

ಮಡಿಕೇರಿ: ಕೊಡಗಿನ ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ವಿಜಯದಶಮಿಯ ದಿನದಂದು ನಡೆಯುವ ದಶಮಂಟಪಗಳ ಮೆರವಣಿಗೆಯಲ್ಲಿ ಡಿಜೆ ಬಳಸಲು ಅವಕಾಶ ಕೋರಿ ದಸರಾ ದಶಮಂಟಪ ಸಮಿತಿ (Madikeri Dasha Mantapa Committee) ನ್ಯಾಯಾಲಯದ ಮೊರೆ ಹೋಗಿದೆ.

ಅಕ್ಟೋಬರ್ 21 ಮತ್ತು 22ರಂದು ಆಯೋಜಿಸಲಾಗಿರುವ ದಸರಾ (Madikeri Dasara) ಮಹೋತ್ಸವದ ವೇಳೆ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಆದೇಶಿಸಬೇಕೆಂದು ಸಮಿತಿಯು ಮನವಿ ಸಲ್ಲಿಸಿದೆ.

ನಿಜ, ಮಡಿಕೇರಿ ದಸರಾ ಮಹೋತ್ಸವದ ಮೆರವಣಿಗೆಯ ವೈಭವವನ್ನು ಕಳೆದ 40 ವರ್ಷಗಳಿಂದ ನಾಡಿನ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಬಾರಿ ಅಕ್ಟೋಬರ್ 21 ಮತ್ತು 22ರಂದು ದಸರಾ ಮಹೋತ್ಸವ ಜರುಗಲಿದೆ. ಉತ್ಸವದ ನಿರ್ವಹಣೆಗಾಗಿ ಕರವಲೆ ಭಗವತಿ ಮಹಿಷ ಮರ್ದಿನಿ ಹಾಗೂ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಸೇರಿದಂತೆ ಒಟ್ಟು 10 ದೇವಾಲಯಗಳ ಸಮಿತಿಗಳನ್ನ ಒಳಗೊಂಡ ‘ದಸರಾ ದಶಮಂಟಪ ಸಮಿತಿ’ ಕಾರ್ಯನಿರ್ವಹಿಸುತ್ತಿದೆ.

ಪ್ರತಿವರ್ಷವೂ ದೇವಾಲಯಗಳ ವಿಷಯಾಧಾರಿತ ಸ್ತಬ್ಧಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತದೆ. ಈ ವೇಳೆ ಡಿಜೆ ಧ್ವನಿವರ್ಧಕ ಬಳಸಲು ಅನುಮತಿ ಕೋರಿ ಸಮಿತಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ದಸರಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಮಿತಿ ಕೋರಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ದಸರಾ ಮಹೋತ್ಸವದ ಸಂಭ್ರಮದಲ್ಲಿ ಡಿಜೆ ಸೌಂಡ್ ಬಳಸಲು ಅವಕಾಶ ಸಿಗಲಿದೆಯೇ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಹೈಕೋರ್ಟ್‌ನ ಮುಂದಿನ ವಿಚಾರಣೆ ಹಾಗೂ ತೀರ್ಪಿನತ್ತ ದಶಮಂಟಪ ಸಮಿತಿಯ ಚಿತ್ತ ನೆಟ್ಟಿದೆ.

ಹಂಚಿಕೊಳ್ಳಿ: