ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಕೆರೆ ಕಾಮಗಾರಿ ವೇಳೆ ಮಣ್ಣಿನ ರಸ್ತೆ ಕುಸಿದು ಲಾರಿ ಪಲ್ಟಿ

ಬೆಂಗಳೂರು: ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Bannerghatta) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವರದನಹಳ್ಳಿಯಲ್ಲಿ ಕೆರೆ ಕಾಮಗಾರಿ ವೇಳೆ ನಿರ್ಮಿಸಿರುವ ಮಣ್ಣಿನ ರಸ್ತೆ ಕುಸಿದು ಲಾರಿಯೊಂದು (Lorry) ಕೆರೆಗೆ...

· ಬೆಂಗಳೂರು ನಗರ
ಕೆರೆ ಕಾಮಗಾರಿ ವೇಳೆ ಮಣ್ಣಿನ ರಸ್ತೆ ಕುಸಿದು ಲಾರಿ ಪಲ್ಟಿ
ಹಂಚಿಕೊಳ್ಳಿ:

ಬೆಂಗಳೂರು: ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Bannerghatta) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವರದನಹಳ್ಳಿಯಲ್ಲಿ ಕೆರೆ ಕಾಮಗಾರಿ ವೇಳೆ ನಿರ್ಮಿಸಿರುವ ಮಣ್ಣಿನ ರಸ್ತೆ ಕುಸಿದು ಲಾರಿಯೊಂದು (Lorry) ಕೆರೆಗೆ ಪಲ್ಟಿಯಾಗಿದೆ.

ಲಾರಿ ಹೊರುಳುತ್ತಿದ್ದಂತೆ ಚಾಲಕ ಜಿಗಿದು ಅಪಾಯದಿಂದ ಪಾರಾಗಿದ್ದಾನೆ. ಬಿಲ್ವರದನಹಳ್ಳಿ ಕೆರೆ ಅಭಿವೃದ್ಧಿ ಪಡಿಸಿ ಏರಿಯ ಎರಡು ಬದಿಗಳಲ್ಲಿ ಮಣ್ಣು ಹಾಕಲಾಗಿದೆ. ಆದರೆ ಲಾರಿ ಬರುತ್ತಿದ್ದಂತೆ ಮಣ್ಣು ಕುಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಎರಡು ತಾಸು ಸ್ಥಳೀಯರು ಹರಸಾಹಸ ಪಟ್ಟು ಲಾರಿಯನ್ನು ಮೇಲಕ್ಕೆತ್ತಿದ್ದರು.

ಕಂಪನಿಯೊಂದರ ಸಿಎಸ್‌ಆರ್ ಅನುದಾನದಡಿಯಲ್ಲಿ ನಡೆಸಿದ ಕಾಮಗಾರಿಯಲ್ಲಿ ಕೆರೆಯ ಬದಿಯಲ್ಲಿ ಮಣ್ಣನ್ನು ಅವೈಜ್ಞಾನಿಕವಾಗಿ ತುಂಬಲಾಗಿದೆ. ಇದರಿಂದಾಗಿ ವಾಹನಗಳು ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಕೆರೆಗೆ ತಡೆಗೋಡೆ ಇಲ್ಲದೇ ಇರುವುದರಿಂದ ವಾಹನಗಳು ಕೆರೆಯತ್ತ ವಾಲಿತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಂಚಿಕೊಳ್ಳಿ: