ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಸುದ್ದಿ

ಜಿ. ಪರಮೇಶ್ವರ್: 'ಉಪ' ಪದ ಹೋಗಿ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ ಶ್ರೀ ವೀರಬಸವ ಸ್ವಾಮೀಜಿ

ತುಮಕೂರು: ದಸರಾ ವೇದಿಕೆಯಲ್ಲೇ ಡಿಸಿಎಂ ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಲಿ (G Parameshwara) ಎಂದು ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ (Tumakuru) ಅವರು ಆಶೀರ್ವದಿಸಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ವೇದ...

· ತುಮಕೂರು
ʻಉಪʼ ಪದ ಹೋಗಿ ʻಮುಖ್ಯಮಂತ್ರಿʼ ಆಗಲಿ; ಪರಮೇಶ್ವರ್‌ಗೆ ಕಾರದ ಮಠದ ಶ್ರೀಗಳ ಆಶೀರ್ವಾದ
ಹಂಚಿಕೊಳ್ಳಿ:

ತುಮಕೂರು: ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಡಿಸಿಎಂ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ (Tumakuru) ಅವರು ಹಾರೈಸಿದ್ದಾರೆ.

ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಮಾತನಾಡಿದ ಶ್ರೀಗಳು, ಜಿ. ಪರಮೇಶ್ವರ್ (G Parameshwara) ಅವರ ಮಾರ್ಗದರ್ಶನದಲ್ಲಿ ತುಮಕೂರು ದಸರಾ ಸಂಭ್ರಮದಿಂದ ನಡೆಯುತ್ತಿದೆ. ಅವರು ಯಾವುದೇ ಅಪೇಕ್ಷೆ ಅಥವಾ ಸ್ವಾರ್ಥವಿಲ್ಲದೆ ದಸರಾ ಆಚರಣೆಯನ್ನು ನಡೆಸುತ್ತಿದ್ದಾರೆ. ಸದ್ಯ ಅವರು ಉಪ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಆ ʻಉಪʼ ಎಂಬ ಪದವು ದೂರವಾಗಿ, ಕೇವಲ ʻಮುಖ್ಯಮಂತ್ರಿʼ ಎಂಬ ಪದ ಮಾತ್ರ ಉಳಿಯಲಿ ಎಂಬುದು ನನ್ನ ಬಯಕೆ. ಅವರು ಮುಖ್ಯಮಂತ್ರಿಯಾಗಲಿ ಎಂದು ಅವರು ಹರಸಿದರು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು, ತುಮಕೂರಿನ ಜನರು ಮೈಸೂರಿಗೆ ತೆರಳಿ ದಸರಾ ವೀಕ್ಷಿಸುವುದು ಕಷ್ಟಕರವಾದುದರಿಂದ, ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸುವ ನಿರ್ಧಾರ ಕೈಗೊಂಡ ಶ್ರೇಯಸ್ಸು ಜಿ. ಪರಮೇಶ್ವರ್ ಅವರಿಗೆ ಸಲ್ಲುತ್ತದೆ. ಮೈಸೂರಿನ ಮಾದರಿಯಲ್ಲಿಯೇ ತುಮಕೂರು ಅಭಿವೃದ್ಧಿ ಹೊಂದುತ್ತಿರುವುದಕ್ಕೆ ತುಮಕೂರು ದಸರಾ ಸಾಕ್ಷಿಯಾಗಿದೆ. ತುಮಕೂರಿನ ದೀಪಾಲಂಕಾರ ನೋಡುವುದೇ ಒಂದು ಸುಂದರ ಅನುಭವ ಎಂದು ಅವರು ಅಭಿಪ್ರಾಯಪಟ್ಟರು.

ಹಂಚಿಕೊಳ್ಳಿ: