ಡೀಸೆಲ್ ಬಳಿಕ ಟಿಕೆಟ್ ರೋಲ್ ಕೊರತೆ; 3-4 ಜನರಿಗೆ ಸೇರಿ ಒಂದೇ ಟಿಕೆಟ್ ವಿತರಣೆ
ಬೀದರ್: ನಾರಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ (Transport Department) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಡಿಸೇಲ್ ಕೊರತೆ ಬಳಿಕ ಈಗಾ ಪ್ರಯಾಣಿಕರಿಗೆ ಟಿಕೆಟ್ ನೀಡುವ ರೋಲ್ (Ticket Roll) ಕೊರತೆಯಾಗಿದೆ. ಪ್ರತಿಯೊ...

ಬೀದರ್: ನಾರಿ ಶಕ್ತಿ ಯೋಜನೆಯ ಜಾರಿಯಿಂದಾಗಿ ಸಾರಿಗೆ ಇಲಾಖೆ (Transport Department) ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಡಿಸೇಲ್ ಕೊರತೆಯ ಬೆನ್ನಲ್ಲೇ ಇದೀಗ ಪ್ರಯಾಣಿಕರಿಗೆ ವಿತರಿಸುವ Ticket Roll ಕೊರತೆ ಉಂಟಾಗಿದೆ. ಪ್ರತಿ ಪ್ರಯಾಣಿಕರಿಗೆ ಪ್ರತ್ಯೇಕ ಟಿಕೆಟ್ ನೀಡುವ ಬದಲು ಸಾರಿಗೆ ಸಿಬ್ಬಂದಿ ಮೂವರು ಅಥವಾ ನಾಲ್ವರು ಪ್ರಯಾಣಿಕರಿಗೆ ಸೇರಿಸಿ ಒಂದೇ ಟಿಕೆಟ್ ನೀಡುತ್ತಿದ್ದಾರೆ. ಬೀದರ್ ಟು ಕಲಬುರಗಿ ಮಾರ್ಗ ಸೇರಿದಂತೆ ವಿವಿಧ ಕಡೆ ಸಂಚರಿಸುವ ಬಸ್‌ಗಳಲ್ಲಿ ಎರಡು ಮೂರು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಲಾಗುತ್ತಿದೆ.
ಟಿಕೆಟ್ ರೋಲ್ ಕೊರತೆಯನ್ನು ನೀಗಿಸಲು ಕಂಡಕ್ಟರ್‌ಗಳು ಹರಸಾಹಸ ಪಡುತ್ತಿದ್ದಾರೆ. ಟಿಕೆಟ್ ಕೊರತೆಯನ್ನು ಸರಿದೂಗಿಸಲು, ರೋಲ್‌ಗಳು ಲಭ್ಯವಿರುವ ಕಂಡಕ್ಟರ್‌ಗಳಿಂದ ಅವುಗಳನ್ನು ಪಡೆದು ಪ್ರಯಾಣಿಕರಿಗೆ ನೀಡುವಂತಹ ಪರಿಸ್ಥಿತಿ ಉದ್ಭವಿಸಿದೆ. ಟಿಕೆಟ್ ರೋಲ್ ಇಲ್ಲದಿರುವುದು ಸಾರಿಗೆ ಸಿಬ್ಬಂದಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.
ಹಣ ಪಾವತಿಯಾಗದ ಕಾರಣದಿಂದ ಇಷ್ಟು ದಿನ ಡಿಸೇಲ್ ಕೊರತೆ ಉಂಟಾಗಿ ಬಸ್ ಸೇವೆ ಸ್ಥಗಿತಗೊಂಡಿತ್ತು. ಇದೀಗ ಪ್ರಯಾಣಿಕರಿಗೆ ನೀಡುವ ಬಸ್ ಟಿಕೆಟ್ ರೋಲ್ ಕೂಡ ಲಭ್ಯವಿಲ್ಲದಂತಾಗಿದ್ದು, ನಾರಿ ಶಕ್ತಿ ಗ್ಯಾರಂಟಿಯಿಂದ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.




