ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ವಿಟ್ಲ: ಇತರೆ ಪ್ರಕರಣ

ಪಿರ್ಯಾಧಿದಾರರಾದ ರಿಜ್ವಾನ್ ಪ್ರಾಯ 22 ವರ್ಷ ಹಳೀರ ಮನೆ, ಮಾಣಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ತಾನು ಮಾಣಿಯ AKARS ಅಂಬುಲೆನ್ಸ್ ವಾಹನದಲ್ಲಿ ಚಾಲಕರಾಗಿದ್ದು, ಕ್ರೀಕೆಟ್ ಆಟ ಆಡುವ ಹವ್ಯಾಸವಿದ್ದು, ಪಿರ್...

· ದಕ್ಷಿಣ ಕನ್ನಡ
ಅಪರಾಧ ಪ್ರಕರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ರಿಜ್ವಾನ್ ಪ್ರಾಯ 22 ವರ್ಷ ಹಳೀರ ಮನೆ, ಮಾಣಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ತಾನು ಮಾಣಿಯ AKARS ಅಂಬುಲೆನ್ಸ್ ವಾಹನದಲ್ಲಿ ಚಾಲಕರಾಗಿದ್ದು, ಕ್ರೀಕೆಟ್ ಆಟ ಆಡುವ ಹವ್ಯಾಸವಿದ್ದು, ಪಿರ್ಯಾದುದಾರರು ಕ್ರಿಕೆಟ್ ಪದ್ಯಾಟಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:11-10-2026 ರಂದು ಪಿರ್ಯಾದುದಾರರು ಮತ್ತು ಅವರ ಸ್ನೇಹಿತರಾದ ಶರೀಫ್, ನಶಾತ್ ರವರು ಸೇರಿಕೊಂಡು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ ಆಹ್ವಾನಿತ 8 ತಂಡಗಳ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು, ಪಂದ್ಯಾಟ ಬೆಳಿಗ್ಗೆ 11.00 ಗಂಟೆಗೆ ಪ್ರಾರಂಭವಾಗಿದ್ದು, ಮದ್ಯಾಹ್ನ ಸುಮಾರು 3.30 ಗಂಟೆಗೆ ಕ್ವಾಲಿಟಿ ಮಾಣಿ ಮತ್ತು GFC ಗಡಿಯಾರ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಕೋರ್ ವಿಚಾರವಾಗಿ ಎರಡು ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭ ಗಡಿಯಾರ ತಂಡದ ಸಮ್ಮಾಸ್ ಎಂಬಾತನು ಪಿರ್ಯಾದುದಾರರ ಸ್ನೇಹಿತ ನಶಾತ್ ನಿಗೆ ಅವಾಚ್ಯ ಶಬ್ದಗಳಿಂದ ಬೈದಾಗ ಪಿರ್ಯಾದುದಾರರು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಯಾಕೆ ಎಂದು ಕೇಳಿದ್ದು, ಆ ಸಮಯ ಪಿರ್ಯಾದುದಾರರನ್ನು ಅವರ ಸ್ನೇಹಿತ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಆರೋಪಿ ಸಮ್ಮಾಸ್ ಮತ್ತು ಆತನ ಇಬ್ಬರೂ ಸ್ನೇಹಿತರು ಸೇರಿಕೊಂಡು ಪಿರ್ಯಾದುದಾರನ್ನು ತಡೆದು ಅಡ್ಡಗಟ್ಟಿ ಆರೋಪಿ ಸಮ್ಮಾಸ್ ಕೈಗಳಿಂದ ಪಿರ್ಯಾದುದಾರರ ತಲೆಗೆ ಮತ್ತು ಮುಖಕ್ಕೆ ಹೊಡೆದಿರುತ್ತಾನೆ. ಆತನ ಇಬ್ಬರೂ ಸ್ನೇಹಿತರು ಸಹ ತಮ್ಮ ಕೈಗಳಿಂದ ಪಿರ್ಯಾದುದಾರರ ಮುಖಕ್ಕೆ ಹಾಗೂ ಬಲ ಕಿವಿಗೆ ಹೊಡೆದಿರುತ್ತಾರೆ. ಆಗ ಸ್ಥಳದಲ್ಲಿದ್ದ ಪಿರ್ಯಾದುದಾರರ ಸ್ನೇಹಿತರು ಹಾಗೂ ಕ್ರಿಕೆಟ್ ತಂಡದ ಆಟಗಾರರು ಸೇರಿಕೊಂಡು ಜಗಳವನ್ನು ಬಿಡಿಸುತ್ತಿರುವ ಸಮಯ ಆರೋಪಿ ಸಮ್ಮಾಸ್ ನು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ನಂತರ ಪಿರ್ಯಾದುದಾರರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸು ಠಾಣಾ ಅಕ್ರ 214/2026 ಕಲಂ: 126(2), 352, 351(2), 115(2) ಜೊತೆಗೆ 3(5) BNS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಂಚಿಕೊಳ್ಳಿ: