ಬೆಳ್ತಂಗಡಿ: ಹಲ್ಲೆ ಪ್ರಕರಣ
ಪಿರ್ಯಾಧಿದಾರರಾದ ಚಂದ್ರೇಶ್ (40) ಏಣಿರು ಪಲ್ಕೆ ಮನೆ, ಕನ್ಯಾಡಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಕುಟುಂಬದ ದೈವದ ವಿಚಾರದಲ್ಲಿ ಸುಮಾರು 3 ತಿಂಗಳ ಹಿಂದೆ ಪಿರ್ಯಾದಿದಾರರಿಗೂ ಹಾಗೂ ...

ಪಿರ್ಯಾಧಿದಾರರಾದ ಚಂದ್ರೇಶ್ (40) ಏಣಿರು ಪಲ್ಕೆ ಮನೆ, ಕನ್ಯಾಡಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಕುಟುಂಬದ ದೈವದ ವಿಚಾರದಲ್ಲಿ ಸುಮಾರು 3 ತಿಂಗಳ ಹಿಂದೆ ಪಿರ್ಯಾದಿದಾರರಿಗೂ ಹಾಗೂ ಆರೋಪಿತನಿಗೆ ಬಾಯಿ ಮಾತಿನಲ್ಲಿ ಜಗಳವಾಗಿದ್ದು, ದಿನಾಂಕ: 11.10.2026 ರಂದು ಸಮಯ ಸುಮಾರು 18.30 ಗಂಟೆಗೆ ಪಿರ್ಯಾದಿದಾರರ ಸ್ನೇಹಿತ ವೆಂಕಟೇಶ್ ಎಂಬವನು ಉಜಿರೆಯ SR ಬಾರ್ ನಲ್ಲಿರುವಾಗ ಅಲ್ಲಿಗೆ ಬಂದ ಆರೋಪಿತನು ವೆಂಕಟೇಶ ನಲ್ಲಿ ನೀನು ಯಾಕೆ ಚಂದ್ರೇಶ್ ನ ಮನೆಗೆ ಹೋಗುತ್ತಿಯಾ ನೀನು ಅವರ ಜೊತೆಯಲ್ಲಿ ಸೇರಬಾರದು, ಅವರ ಮನೆಗೆ ಹೋಗಬಾರದು, ಅವರ ಲಾರಿ ತೊಳೆಯ ಬಾರದೂ, ಅವರು ಮಾಡುವ ದೈವದ ಕೆಲಸಕ್ಕೆ ಹೋಗಬಾರದು ಎಂದು ತಿಳಿಸಿದ ವಿಚಾರವನ್ನು ಪಿರ್ಯಾದಿದಾರರಿಗೆ ವಂಕಟೇಶ್ ನು ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಸಮಯ ಸುಮಾರು 19.10 ಗಂಟೆಗೆ SR ಬಾರ್ ನ ಹತ್ತಿರ ಬಂದಾಗ ಅಲ್ಲೇ ಇದ್ದ ಆರೋಪಿತನು ಪಿರ್ಯಾದಿದಾರನ್ನು ನೋಡಿದಾಗ ಅವರಿಬ್ಬರಿಗೂ ಮಾತಿಗೆ-ಮಾತಾಗಿ ಜಗಳವಾಗಿರುತ್ತದೆ. ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು ಕನ್ನಾಡಿ ಗ್ರಾಮದ ಏಣಿರು ಪಲ್ಕೆ ಎಂಬಲ್ಲಿರುವ ತಮ್ಮ ಮನೆಗೆ ಬಂದಾಗ ಆ ಸಮಯ ಮನೆಯಲ್ಲಿ ಅವರ ತಂದೆ ಒಬ್ಬರೇ ಇದ್ದರು. ಪಿರ್ಯಾದಿದಾರರು ತಮ್ಮ ಬಾಬ್ತು ಲಾರಿಯನ್ನು ತೊಳೆಯಲು ತನ್ನ ಸ್ನೇಹಿತ ವೆಂಕಟೇಶ್ ನಿಗೆ ಕರೆ ಮಾಡಿ ಬರುವಂತೆ ತಿಳಿಸಿದಂತೆ ವೆಂಕಟೇಶ್ ನು ಬಂದು ಇಬ್ಬರು ಲಾರಿಯನ್ನು ತೊಳೆಯುತ್ತಿರುವಾಗ ಸಮಯ ಸುಮಾರು 22.30 ಗಂಟೆಗೆ ಆರೋಪಿತನು ಮನೆಗೆ ಬಂದು ಒಳಗೆ ಹೋಗಿ ತಂದೆಯೊಂದಿಗೆ ಮಾತನಾಡುತ್ತಿರುವಾಗ ಪಿರ್ಯಾದಿದಾರರು ಮನೆಯ ಒಳಗೆ ಹೋಗಿ ಆರೋಪಿತನಲ್ಲಿ ಏನೇ ಇದ್ದರು ನಾಳೆ ಮಾತನಾಡುವ ಎಂದಾಗ, ಆರೋಪಿತನು ಈಗಲೇ ಮಾತನಾಡು ಎಂದು ಹೇಳಿದಾಗ, ಪಿರ್ಯಾದಿದಾರರ ತಂದೆ ಲಾರಿ ನಿಲ್ಲಿಸಿದ ಸ್ಥಳಕ್ಕೆ ಆರೋಪಿತನನ್ನು ಕರೆದುಕೊಂಡು ಬಂದಾಗ, ಆರೋಪಿತನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು, ಅವರಿಬ್ಬರ ನಡುವೆ ಜಗಳವಾಗಿರುತ್ತದೆ, ಆರೋಪಿತನು ಅಲ್ಲೇ ಇದ್ದ ಮರದ ದೊಣ್ಣೆಯನ್ನು ತಗೆದುಕೊಂಡು ಪಿರ್ಯಾದಿದಾರರ ಬಾಬ್ತು KA 21 D 1867 ನೇ ಲಾರಿಯ ಮುಂಭಾಗದ ಗ್ಲಾಸ್ ಗೆ ಹೊಡೆದಾಗ ಜಖಂಗೊಂಡಿದ್ದು, ನಂತರ ಅದೇ ದೊಣ್ಣೆಯಿಂದ ಹೊಡೆಯಲು ಬಿಸಿದಾಗ ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಹೋದಾಗ ಎಡಕನ್ನೆಯ ಕೆಳಭಾಗಕ್ಕೆ ತಾಗಿ ರಕ್ತದ ಗಾಯವಾಗಿರುತ್ತದೆ. ಈ ಬಗ್ಗೆ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಹೋಗಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಹೋಗುವಂತೆ ತಿಳಿಸಿದಂತೆ, ಪಿರ್ಯಾದಿದಾರರು ಉಜಿರೆ ಬೆನಕಾ ಆಸ್ಪತ್ರೆಗೆ ಬಂದು ಚಿಕಿತ್ಸೆ ದಾಖಲಾಗಿರುತ್ತಾರೆ, ಹಾನಿಗೊಂಡ ಲಾರಿಯ ಮುಂಭಾಗದ ಗ್ಲಾಸಿನ ಅಂದಾಜು ಮೌಲ್ಯ 10,000/- ರೂ ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಅ ಕ್ರ 113/2026 ಕಲಂ: 352, 118(1), 324(2) ಬಿಎನ್ಎಸ್ 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಪೊಲೀಸ್ ಠಾಣೆ



