ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ಬೆಳ್ಳಾರೆ: ಇತರೆ ಪ್ರಕರಣ

ದಿನಾಂಕ 12.10.2026ರಂದು ಮೀನು ಹಿಡಿಯಲೆಂದು ಭರತ್ (28), ಕಲ್ಮಡ್ಕ ಸುಳ್ಯ ಮತ್ತು ರಮೇಶ್@ ಗಣೇಶ್ (36), ಗುರುವಾಯನಕೆರೆ ಬೆಳ್ತಂಗಡಿ ರವರು ಇನ್ನೊಬ್ಬ ಅಪ್ರಾಪ್ತ ಬಾಲಕನೊಂದಿಗೆ ಸುಳ್ಯದ ಕಲ್ಮಡ್ಕ ಗ್ರಾಮದಲ್ಲಿನ ಹೊಳೆ...

· ದಕ್ಷಿಣ ಕನ್ನಡ
ಅಪರಾಧ ಪ್ರಕರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ದಿನಾಂಕ 12.10.2026ರಂದು ಮೀನು ಹಿಡಿಯಲೆಂದು ಭರತ್ (28), ಕಲ್ಮಡ್ಕ ಸುಳ್ಯ ಮತ್ತು ರಮೇಶ್@ ಗಣೇಶ್ (36), ಗುರುವಾಯನಕೆರೆ ಬೆಳ್ತಂಗಡಿ ರವರು ಇನ್ನೊಬ್ಬ ಅಪ್ರಾಪ್ತ ಬಾಲಕನೊಂದಿಗೆ ಸುಳ್ಯದ ಕಲ್ಮಡ್ಕ ಗ್ರಾಮದಲ್ಲಿನ ಹೊಳೆಕ್ಕೆರೆ ಎಂಬಲ್ಲಿ ತೋಡಿನಲ್ಲಿ ಹರಿಯುವ ನೀರಿನಲ್ಲಿ ಮೀನು ಹಿಡಿಯುತ್ತಾ ಮುಂದೆ ಸಾಗಿದ್ದು ಅದರ ಪಕ್ಕದಲ್ಲಿನ ಮಧುಸೂದನ್ ಬಟ್ ಎಂಬವರ ತೋಟದಿಂದ ವಿದ್ಯುತ್ ಪ್ರವಹಿಸಿ ಬಿದ್ದಿರುವುದಾಗಿದೆ ಇದನ್ನು ನೋಡಿದ ಜೊತೆಗಿದ್ದ ಅಪ್ರಾಪ್ತ ಬಾಲಕ ತನ್ನ ಸಂಬಂಧಿಕರೊಂದಿಗೆ ಸದ್ರಿ ವಿಷಯವನ್ನು ತಿಳಿಸಿ ಅವರನ್ನು ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಸದ್ರಿ ಭರತ್ ಮತ್ತು ರಮೇಶ್ @ ಗಣೇಶ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಹಾಗೂ ಗಾಯಗೊಂಡ ಬಾಲಕನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಅನಧಿಕೃತವಾಗಿ ತೋಟಕ್ಕೆ ವಿದ್ಯುತ್ ಅಳವಡಿಸಿರುವ ಮಧುಸೂದನ್ ಬಟ್ ರವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆ.ಕ್ರ 59/2026 ಕಲಂ 105 ಬಿಎನ್ಎಸ್ ಮತ್ತು 135(1)(E) ಎಲೆಕ್ಟ್ರಿಸಿಟಿ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಬಟ್ ರವರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 59/2026

ಹಂಚಿಕೊಳ್ಳಿ: