ಪುತ್ತೂರು ನಗರ: ಕಳವು ಪ್ರಕರಣ
ಪಿರ್ಯಾಧಿದಾರರಾದ ಶ್ರೀಮತಿ ರಶ್ಮಿ ಬಿ.ಭಟ್ ಪ್ರಾಯ 48 ವರ್ಷ, ಗಂಡ: ಬಾಲಸುಬ್ರಹ್ಮಣ್ಯ.ಎ.ಕೆ ರಾಮದಾಸ್ ನಗರ ಕಾಸರಗೋಡು ತಾಲೂಕು ಮತ್ತು ಜಿಲ್ಲೆ,ಕೇರಳ ಎಂಬವರ ದೂರಿನಂತೆ ಪಿರ್ಯಾದಿದಾರರು ಮೂಲತಃ ಪುತ್ತೂರು ತಾಲೂಕು ಪುತ್...

ಪಿರ್ಯಾಧಿದಾರರಾದ ಶ್ರೀಮತಿ ರಶ್ಮಿ ಬಿ.ಭಟ್ ಪ್ರಾಯ 48 ವರ್ಷ, ಗಂಡ: ಬಾಲಸುಬ್ರಹ್ಮಣ್ಯ.ಎ.ಕೆ ರಾಮದಾಸ್ ನಗರ ಕಾಸರಗೋಡು ತಾಲೂಕು ಮತ್ತು ಜಿಲ್ಲೆ,ಕೇರಳ ಎಂಬವರ ದೂರಿನಂತೆ ಪಿರ್ಯಾದಿದಾರರು ಮೂಲತಃ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಮುಖ್ಯರಸ್ತೆಯ ವಾಸಿಯಾಗಿದ್ದು, ಪ್ರಸ್ತುತ ಕಾಸರಗೋಡಿನಲ್ಲಿ ವಾಸವಿರುವುದಾಗಿದೆ. ಪುತ್ತೂರಿನ ಮನೆಯಲ್ಲಿ ಯಾರೂ ವಾಸ್ತವ್ಯ ಇರುವುದಿಲ್ಲ. ಪಿರ್ಯಾದಿದಾರರು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಪುತ್ತೂರಿನ ಮನೆಗೆ ಬಂದು ಹೋಗುತ್ತಿರುತ್ತಾರೆ. ದಿನಾಂಕ.15.09.2026 ರಂದು ಪಿರ್ಯಾದಿದಾರರು ಪುತ್ತೂರಿನ ಮನೆಗೆ ಬಂದು ಹೋಗಿರುತ್ತಾರೆ. ದಿನಾಂಕ.11-10-2026ರಂದು ಬೆಳಿಗ್ಗೆ ಸಮಯ 07.00 ಗಂಟೆಗೆ ಪಿರ್ಯಾದಿದಾರರ ದೊಡ್ಡಪ್ಪ ಮಗ ಎನ್.ಟಿ.ಕಿಶೋರ್ ರವರು ಮೊಬೈಲ್ ಗೆ ಕರೆ ಮಾಡಿ ಪುತ್ತೂರಿನಲ್ಲಿರುವ ನಿಮ್ಮ ಮನೆಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮತ್ತು ಅವರ ಗಂಡ ಕೂಡಲೇ ಕಾಸರಗೋಡಿನಿಂದ ಹೊರಟು ಪುತ್ತೂರಿಗೆ ಬಂದು ಮನೆಗೆ ಹೋಗಿ ನೋಡಿದಾಗ ಅವರ ಮನೆಯ ಹಿಂಬದಿಯ 2 ಬೆಡ್ ರೂಮ್, 2 ಬಾತ್ ರೂಮ್ ಗಳು ಹಾಗೂ ಹಿಂಬದಿಯಲ್ಲಿರುವ ತೆರೆದ ಹಾಲ್ ನಂತಹ ಛಾವಣಿಯು ಸುಟ್ಟು ಕರಕಲಾಗಿರುವುದು ಕಂಡು ಬಂದಿರುತ್ತದೆ. ಮನೆಯ ಒಳಗೆ ಹೋಗಿ ಪರಿಶೀಲಿಸಿದಲ್ಲಿ ಮನೆಯ ಹಿಂಬದಿಯ ಕಿಚನ್ ರೂಮ್ ಬಾಗಿಲಿನ ಕೆಳಗಿನ 1 ಅಡ್ಡ ಹಲಗೆಯನ್ನು ತೆಗೆದಿರುವುದು ಕಂಡು ಬಂತು. ಮನೆಯ ಒಳಗಿನ ಎಲ್ಲಾ ವಿದ್ಯುತ್ ಸ್ವಿಚ್ ಬೋರ್ಡ್ ಗಳನ್ನು ಜಖಂ ಮಾಡಿ ತೆರೆದು ಅದರ ವಯರ್ ಗಳನ್ನು ಕೊಂಡು ಹೋಗಿರುವುದು, ಮನೆಯ ಕೋಣೆಗಳಿಗೆ ಹಾಕಿದ್ದ 5 ಸೀಲಿಂಗ್ ಫ್ಯಾನ್ ಗಳನ್ನು ಹಾಗೂ ಬುಟ್ಟಿಯಲ್ಲಿ ಇರಿಸಿದ್ದ ದೇವರ ಪೂಜಾ ಸಾಮಾಗ್ರಿಗಳಾದ ದೊಡ್ಡ ದೀಪ - 2, ಆರತಿ ಮಾಡುವ ಸಾಮಾಗ್ರಿ 3-4 ಮತ್ತು ಹಿತ್ತಾಳೆಯ ತಟ್ಟೆ-2 ಕಾಣಿಸದೇ ಇರುವುದು ಕಂಡು ಬಂತು. ಮನೆಯಲ್ಲಿದ್ದ ದುರಸ್ಥಿಗೆ ಬಂದಿದ್ದ ಫ್ರಿಡ್ಜ್ ಮತ್ತು ಮೈಕ್ರೋವೇವ್ ಗಳನ್ನು ಕಳಚಿ ನೋಡಿರುವುದು ಕಂಡು ಬಂತು. ಸದ್ರಿ ಪಿರ್ಯಾದಿದಾರರ ಮನೆಯ ಸಾಮಾಗ್ರಿಗಳು ಕಾಣಿಸದೇ ಇರುವುದು ಕಂಡು ಬಂದಿರುವುದನ್ನು ನೋಡಿದಾಗ ಅನಾಥವಾಗಿ ಪಾಳು ಬಿದ್ದಂತೆ ಇದ್ದ ಪಿರ್ಯಾದಿದಾರರ ಮನೆಗೆ ದಿನಾಂಕ.15.09.2026 ರಂದು 16-00 ಗಂಟೆಯಿಂದ ದಿನಾಂಕ.11.10.2026 ರ 02.45 ಗಂಟೆಯ ಮಧ್ಯೆ ಯಾರೋ ಕಳ್ಳರು ಒಳನುಗ್ಗಿ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವಂತೆ ಕಂಡು ಬರುತ್ತದೆ.. ಪಿರ್ಯಾದಿದಾರರ ಮನೆಯಿಂದ ಕಳವು ಮಾಡಿಕೊಂಡು ಹೋದ ಸಾಮಾಗ್ರಿಗಳ ಅಂದಾಜು ಬೆಲೆ ಸುಮಾರು ರೂ.30,000/- ಆಗಬಹುದು. ಹಾಗೂ ಮನೆಗ ಬೆಂಕಿ ಬಿದ್ದಿರುವುದರಿಂದ ಅಂದಾಜು 10 ಲಕ್ಷ ರೂಗಳಷ್ಟು ನಷ್ಟವಾಗಿರಬಹುದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ : 122/2026ಕಲಂ : 331(1), 331(4), 305 ಬಿ ಎನ್ ಎಸ್ 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.



