ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಅಪರಾಧ

ಸುಬ್ರಹ್ಮಣ್ಯ: ಅಸ್ವಾಭಾವಿಕ ಮರಣ ಪ್ರಕರಣ

ಪಿರ್ಯಾಧಿದಾರರಾದ ದೇವಿಪ್ರಸಾದ್ ಎಂ ಪ್ರಾಯ:39 ವರ್ಷ,ತಂದೆ; ದಿ/ರಾಮಣ್ಣಗೌಡ .10.2026 ರಂದು ಸಮಯ ಸುಮಾರು 12.00 ಗಂಟೆಗೆ ಫಿರ್ಯಾದುದಾರರ ದೊಡ್ಡಪ್ಪ ಪುಟ್ಟಣಗೌಡ ರವರ ಮಗನಾದ ಮಹೇಶ್ ಎಂ.ಪಿ ಎಂಬಾತನಿಗೆ ಆರೋಗ್ಯದಲ್ಲಿ ...

· ದಕ್ಷಿಣ ಕನ್ನಡ
ಅಸ್ವಾಭಾವಿಕ ಮರಣ — ಜಿಲ್ಲಾ ಪೊಲೀಸ್ ವರದಿ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ದೇವಿಪ್ರಸಾದ್ ಎಂ ಪ್ರಾಯ:39 ವರ್ಷ,ತಂದೆ; ದಿ/ರಾಮಣ್ಣಗೌಡ .10.2026 ರಂದು ಸಮಯ ಸುಮಾರು 12.00 ಗಂಟೆಗೆ ಫಿರ್ಯಾದುದಾರರ ದೊಡ್ಡಪ್ಪ ಪುಟ್ಟಣಗೌಡ ರವರ ಮಗನಾದ ಮಹೇಶ್ ಎಂ.ಪಿ ಎಂಬಾತನಿಗೆ ಆರೋಗ್ಯದಲ್ಲಿ ಉಸಿರಾಟದ ತೊಂದರೆಯಾಗಿ ಆರೋಗ್ಯದಲ್ಲಿ ಏರುಪೇರಾದ ಬಗ್ಗೆ ಮಾಹಿತಿಯಂತೆ ತಕ್ಷಣ ಫಿರ್ಯಾದುದಾರರು ಮಹೇಶ್ ರವರ ಮನೆಯಾದ ಯೇನೆಕಲ್ಲು ಗ್ರಾಮದ ಮಾಣಿಬೈಲು ಎಂಬಲ್ಲಿಗೆ ಹೋಗಿದ್ದು ನಂತರ ಮಹೇಶನನ್ನು ಚಿಕಿತ್ಸೆಗಾಗಿ ಖಾಸಗಿ ವಾಹನದಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಮಹೇಶರವರ ಪತ್ನಿ ಬೀನ ಕುಮಾರಿ ಮತ್ತು ಅವರ ಮಗನಾದ ಬ್ರಿಜೇಶ್ ಎಂ ರವರು ಹೊರಟು ಗುತ್ತಿಗಾರು ತಲುಪಿದಾಗ ಮಹೇಶ್ರವರ ಆರೋಗ್ಯದಲ್ಲಿ ಉಸಿರಾಟದ ತೊಂದರೆಯಾಗಿದ್ದು ನಂತರ ಆತನು ಬದುಕಿರುವ ಸಾದ್ಯತೆ ಇರುವುದಾಗಿ ತಿಳಿದು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದಾಗ ಮಹೇಶರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಹೇಶರವರ ಪತ್ನಿ ಫಿರ್ಯಾದುದಾರರಿಗೆ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 19/2026 ಕಲಂ:194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆ

ಹಂಚಿಕೊಳ್ಳಿ: