ಬೆಳ್ತಂಗಡಿ: ಅಪಘಾತ ಪ್ರಕರಣ
ಪಿರ್ಯಾಧಿದಾರರಾದ ಮಹಮ್ಮದ್ ಆಸಿಕ್ ಪ್ರಾಯ 29 ವರ್ಷ ಮೊಲ್ಲಿಬೆಟ್ಟು ಮನೆ ಮಿತ್ತಬಾಗಿಲು ಗ್ರಾಮ, ಕಿಲ್ಲೂರು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:12.10.2026 ರಂದು ಉಜಿರೆಯ ಅನುಗ್ರಹ...

ಪಿರ್ಯಾಧಿದಾರರಾದ ಮಹಮ್ಮದ್ ಆಸಿಕ್ ಪ್ರಾಯ 29 ವರ್ಷ ಮೊಲ್ಲಿಬೆಟ್ಟು ಮನೆ ಮಿತ್ತಬಾಗಿಲು ಗ್ರಾಮ, ಕಿಲ್ಲೂರು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:12.10.2026 ರಂದು ಉಜಿರೆಯ ಅನುಗ್ರಹ ಚರ್ಚ್ ಎದುರಿನ ಬಿಲ್ಡಿಂಗ್ನಲ್ಲಿ ಕೆಲಸ ಮಾಡುತ್ತಿರುವಾಗ, ಪಿರ್ಯಾದುದಾರರ ಜೊತೆ ಕೆಲಸ ಮಾಡಿಕೊಂಡಿರುವ ಉಮ್ಮಾರ್ ಕುಂಞ ರವರು ರೆಹ್ಮಾನಿಯ ಹೋಟೆಲ್ ಗೆ ತೆರಳಿ ವಾಪಾಸ್ಸು ಹೋಟೆಲ್ ಕಡೆಯಿಂದ ಬಿಲ್ಡಿಂಗ್ ಕಡೆಗೆ ರಾಷ್ರೀಯ ಹೆದ್ದಾರಿ -73 ರ ಡಾಮಾರು ರಸ್ತೆಯನ್ನು ದಾಟುತ್ತಿರುವ ಸಮಯ ಸುಮಾರು ಮಧ್ಯಾಹ್ನ 12.00 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅನುಗ್ರಹ ಸ್ಟೀಲ್ ಮತ್ತು ಮೆಟಲ್ ಅಂಗಡಿ ಬಳಿ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ KA 21 MA 5654 ನೇ ಕಾರನ್ನು ಅದರ ಚಾಲಕ ಆಬೂಬಕ್ಕರ್ ಸಿದ್ದಿಕ್ ರವರು ಆಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಡಾಮಾರು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಉಮ್ಮಾರ್ ಕುಂಞ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಡಾಮಾರು ರಸ್ತೆಗೆ ಮುಗುಚಿ ಬಿದ್ದಿದ್ದು ಉಮ್ಮಾರ್ ಕುಂಞ ರವರಿಗೆ ಎಡಬದಿಯ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಬಲಕೈಗೆ ತರಚಿದ ರಕ್ತಗಾಯವಾದವರನ್ನು ಪಿರ್ಯಾದುದಾರರು ಹಾಗೂ ಅಲ್ಲಿ ಸೇರಿದವರು ಅವರನ್ನು ಎತ್ತಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಜಿರೆಯ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 83/2026 ಕಲಂ: 281,125 (a) BNS, ಯಂತೆ ಪ್ರಕರಣ ದಾಖಲಾಗಿರುತ್ತದೆ.



