ಉಕ್ರೇನ್ಗೆ ರಹಸ್ಯ ಮಾಹಿತಿ ಸೋರಿಕೆ: 300 ರಷ್ಯನ್ ಸೈನಿಕರ ಸಾವಿಗೆ ಕಾರಣನಾದ ಲೆಫ್ಟಿನೆಂಟ್ ಲೆವ್ ಸ್ಟುಪ್ನಿಕೋವ್
ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಡುವೆ, ತನ್ನದೇ ದೇಶದ ಸೇನೆಗೆ ದ್ರೋಹ ಬಗೆದು 300ಕ್ಕೂ ಹೆಚ್ಚು ರಷ್ಯನ್ ಸೈನಿಕರ ಹತ್ಯೆಗೆ ಕಾರಣನಾದ ರಷ್ಯಾದ ಯುವ ಸೇನಾಧಿಕಾರಿಯ ಕಥೆ ಈಗ ಜಾಗತಿಕವಾಗಿ ಭಾರಿ ಸಂಚಲನ ಮೂಡಿಸಿದೆ. ರಷ್ಯನ್ ಸೇ...

ರಷ್ಯಾದ 26 ವರ್ಷದ ಸಂವಹನ ಅಧಿಕಾರಿ ಲೆಫ್ಟಿನೆಂಟ್ ಲೆವ್ ಸ್ಟುಪ್ನಿಕೋವ್ ತನ್ನದೇ ದೇಶದ ಸೇನಾ ರಹಸ್ಯಗಳನ್ನು ಉಕ್ರೇನ್ಗೆ ಹಂಚಿಕೊಳ್ಳುವ ಮೂಲಕ ದ್ರೋಹ ಎಸಗಿದ್ದಾನೆ. ಫೆಬ್ರವರಿ 2024ರಲ್ಲಿ ಈತ ನೀಡಿದ ಮಾಹಿತಿಯಿಂದ ನಡೆದ ಕ್ಷಿಪಣಿ ದಾಳಿಯಲ್ಲಿ ಕರ್ನಲ್ ಗುಸೇನ್ ಮುಸಾಯೆವ್ ಸೇರಿದಂತೆ 68 ಸೈನಿಕರು ಮೃತಪಟ್ಟಿದ್ದರು. ಒಟ್ಟಾರೆಯಾಗಿ ಈತ ನೀಡಿದ ಮಾಹಿತಿ ಆಧರಿಸಿ ನಡೆದ ದಾಳಿಗಳಲ್ಲಿ 300ಕ್ಕೂ ಹೆಚ್ಚು ರಷ್ಯನ್ ಸೈನಿಕರು ಸಾವನ್ನಪ್ಪಿದ್ದಾರೆ. ನಂತರ ಜುಲೈ 2024ರಲ್ಲಿ ಉಕ್ರೇನ್ಗೆ ಪಲಾಯನ ಮಾಡಿದ ಸ್ಟುಪ್ನಿಕೋವ್, ಪ್ರಸ್ತುತ ರಷ್ಯನ್ ವಾಲಂಟಿಯರ್ ಕಾರ್ಪ್ಸ್ ಸೇರಿಕೊಂಡು ತನ್ನ ಹಳೆಯ ದೇಶದ ವಿರುದ್ಧವೇ ಹೋರಾಡುತ್ತಿದ್ದಾನೆ.




