ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಅಪರಾಧ

ಉಪ್ಪಿನಂಗಡಿ: ಇತರೆ ಪ್ರಕರಣ

ಪಿರ್ಯಾಧಿದಾರರಾದ ಮಿಥಿಲೇಶ್ (18) ತಂದೆ ದಯಾನಂದ ಎಸ್. ವಾಸ ಸಿ.ಅರ್. ಸಿ. ಕಾಲೋನಿ, ಕೋನಾಜೆ ಗ್ರಾಮ, ಕಡ್ಯ ಅಂಚೆ, ಕಡಬ ತಾಲೂಕು. ಹಾಲಿ ಮಾವಿನಕಟ್ಟೆ, ಬಳಂಜ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 16...

· ದಕ್ಷಿಣ ಕನ್ನಡ
ಪೊಲೀಸ್ ವಾಹನ
ಹಂಚಿಕೊಳ್ಳಿ:

ಪಿರ್ಯಾಧಿದಾರರಾದ ಮಿಥಿಲೇಶ್ (18) ತಂದೆ ದಯಾನಂದ ಎಸ್. ವಾಸ ಸಿ.ಅರ್. ಸಿ. ಕಾಲೋನಿ, ಕೋನಾಜೆ ಗ್ರಾಮ, ಕಡ್ಯ ಅಂಚೆ, ಕಡಬ ತಾಲೂಕು. ಹಾಲಿ ಮಾವಿನಕಟ್ಟೆ, ಬಳಂಜ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 16.10.2026 ರಂದು ಪಿರ್ಯಾದಿದಾರರು ತನ್ನ ಅತ್ತೆ ಮಗಾಧೇವಿ ರವರೊಂದಿಗೆ ತನ್ನ ಸ್ವಂತ ಮನೆಯಾದ ಕಡಬ ತಾಲೂಕು ಕೋಣಾಜೆ ಗ್ರಾಮಕ್ಕೆ ರೇಶನ್ ಕಾರ್ಡ್ ಬಗ್ಗೆ ಕೆ.ವೈ.ಸಿ. ಗೆ ಹೆಬ್ಬೆಟ್ಟು ನೀಡಲು ಬಳಂಜದಿಂದ ಕೋನಾಜೆಗೆ ತನ್ನ ಬಾಬ್ತು ಬೈಕ್ ನಂಬ್ರ KA.21.EA.9184 ನೇಯದರಲ್ಲಿ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಬರುತ್ತಿರುವ ಸಮಯ ಬೆಳಿಗ್ಗೆ ಸುಮಾರು 11.45 ಗಂಟೆಗೆ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಹಲೇಜಿ ಎಂಬಲ್ಲಿಗೆ ತಲುಪುವಾಗ ಆರೋಪಿತರುಗಳು ಕಾರು ನಂಬ್ರ KA.20.MA.6800 ನೇಯದರಲ್ಲಿ ಬಂದು ಪಿರ್ಯಾದಿದಾರರ ಬೈಕನ್ನು ಅಕ್ರಮವಾಗಿ ತಡೆದು ನಿಲ್ಲಿಸಿ 1 ನೇ ಅಪಾದಿತ ತನ್ವೀಶ್ ಮತ್ತು ಇತರ ಇಬ್ಬರು ಕಾರಿನಿಂದ ಇಳಿದು ತನ್ವೀಶ್ ಎಂಬಾತನು ಪಿರ್ಯಾದಿಯನ್ನು ಉದ್ದೇಶಿಸಿ ನನ್ನ ಹಣ ಎಲ್ಲಿ ಯಾಕೆ ಹಣ ಕೊಟ್ಟಿಲ್ಲ ಎಂದು ಜೋರು ಮಾಡಿ ಬೆದರಿಸಿದ್ದು, ಆ ಸಮಯ ಕಪ್ಪಗೆ ಇದ್ದ ವ್ಯಕ್ತಿ ಚೂರಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿ ಪಿರ್ಯಾದಿದಾರರ ಪ್ಯಾಂಟಿನ ಕಿಸೆಯಿಂದ ಜಿಯೋ ಸಿಮ್ ನಂಬ್ರ 8762234893 ಅಳವಡಿಸಿದ ಸುಮಾರು 3,000/- ರೂ. ಮೌಲ್ಯದ ಸ್ಯಾಮಸಂಗ್ ಹ್ಯಾಂಡ್ರಾಯಿಡ್ ಸೆಟ್ ಹಾಗೂ ಪಿರ್ಯಾದಿಯ ಅಂಗಿಯ ಕಿಸೆಯಲ್ಲಿದ್ದ 5,200/- ರೂ. ನಗದನ್ನು ಬಲತ್ಕಾರವಾಗಿ ತೆಗೆದ ಸಮಯ ಪಿರ್ಯಾದಿಯ ಅತ್ತೆ ರವರು ಯಾಕೆ ಮೊಬೈಲ್ ತೆಗೆದುಕೊಂಡದ್ದು ಎಂದು ಆರೋಪಿತರಲ್ಲಿ ವಿಚಾರಿಸಿದಾಗ ಪಿರ್ಯಾದಿಯ ಅತ್ತೆಯ ಕೈಯಲ್ಲಿದ್ದ ಜಿಯೋ ಸಿಮ್ ನಂಬ್ರ 9380830588 ಅಳವಡಿಸಿದ್ದ ಸುಮಾರು 2,000/- ರೂ. ಮೌಲ್ಯದ ಪೋಕೋ ಹ್ಯಾಂಡ್ರಾಯಿಡ್ ಸೆಟ್ ಮೊಬೈಲನ್ನು ಬಲತ್ಕಾರವಾಗಿ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ: 134/2026 . ಕಲಂ: 126(2), 308(5) ಜೊತೆಗೆ 3(5) ಬಿ ಎನ್ ಎಸ್-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಂಚಿಕೊಳ್ಳಿ: