ಪುತ್ತೂರು: ಅಪಘಾತ ಪ್ರಕರಣ
ಪಿರ್ಯಾಧಿದಾರರಾದ ಸುನೀಲ್ ಕಮಾರ್ (49) ಮೊಟ್ಟೆತ್ತಡ್ಕ ಮನೆ, ಕೆಮ್ಮಿಂಜೆ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 16.10.2026 ರಂದು 18.30 ಗಂಟೆಗೆ ಆರೋಪಿ ಸ್ಕೂಟರ್ ಸವಾರೆ ಮಮತಾ ಎಂಬುವವರು KA-21-U-9804 ನೇ...

ಪಿರ್ಯಾಧಿದಾರರಾದ ಸುನೀಲ್ ಕಮಾರ್ (49) ಮೊಟ್ಟೆತ್ತಡ್ಕ ಮನೆ, ಕೆಮ್ಮಿಂಜೆ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 16.10.2026 ರಂದು 18.30 ಗಂಟೆಗೆ ಆರೋಪಿ ಸ್ಕೂಟರ್ ಸವಾರೆ ಮಮತಾ ಎಂಬುವವರು KA-21-U-9804 ನೇ ನೋಂದಣಿ ನಂಬ್ರದ ಸ್ಕೂಟರ್ ನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸಂಪ್ಯ ಕಡೆಗೆ ಚಲಾಹಿಸಿಕೊಂಡು ಹೋಗುತ್ತಾ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಸ್ಕೂಟರನ್ನು ಯಾವುದೇ ಮುನ್ಸೂಚನೆ ನೀಡದೇ ಅಥವಾ ಬಲಭಾಗಕ್ಕೆ ತಿರುಗುವ ಸೂಚಕ ದೀಪವನ್ನು (ಇಂಡಿಕೇಟರ್) ಹಾಕದೆ ಬಲಬದಿಗೆ ಸವಾರಿ ಮಾಡಿದ ಪರಿಣಾಮ ಪಿರ್ಯಾದುದಾರದ ಸುನೀಲ್ ಕುಮಾರ್ ರವರು KA 21 B 4006 ನೇ ನೊಂದಣಿ ನಂಬ್ರದ ಆಟೋರಿಕ್ಷಾದಲ್ಲಿ ಚಾಲಕರಾಗಿ ಇಸಾಕ್, ನವ್ಯ ಮತ್ತು ನವೀನ್ ಹಾಗೂ 3 ವರ್ಷದ ಮಗು ಸಿನ್ ಜಾ ನೂರಿನ್ ರವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಸಂಪ್ಯ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದವರಿಗೆ ಡಿಕ್ಕಿಯಾಗಿ ಅಪಘಾತವುಂಟಾಗಿದ್ದು, ಪಿರ್ಯಾದುದಾರರು ಅಪಘಾತ ತಪ್ಪಿಸುವ ಉದ್ದೇಶದಿಂದ ಆಟೋರಿಕ್ಷಾವನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಪಲ್ಟಿಯಾಗಿರುತ್ತದೆ. ಈ ಅಪಘಾತದ ಪರಿಣಾಮ ಸ್ಕೂಟರ್ ಸವಾರೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯವಾಗಿರುತ್ತದೆ. ಆಟೋರಿಕ್ಷಾ ಪ್ರಯಾಣಿಕರಾದ ಇಸಾಕ್ ರವರಿಗೆ ಹಣೆಯ ಭಾಗದಲ್ಲಿ ರಕ್ತಗಾಯವಾಗಿರುತ್ತದೆ. ಹಾಗೂ ಉಳಿದ ಪ್ರಯಾಣಿಕರಿಗೆ ಮತ್ತು ಆಟೋ ಚಾಲಕನಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಗೊಂಡಿದ್ದ ಸ್ಕೂಟರ್ ಸವಾರೆಯನ್ನು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆ 151/2026 ಕಲಂ: 281, 125(a), 106(1) ಬಿಎನ್ಎಸ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ




