ಬೆಳ್ಳಾರೆ: ಅಸ್ವಾಭಾವಿಕ ಮರಣ ಪ್ರಕರಣ
ಪಿರ್ಯಾಧಿದಾರರಾದ ಪ್ರಶಾಂತ್ ಪ್ರಾಯ 30 ವರ್ಷ ಬಾರೆತ್ತಡಿ ಮನೆ ಕಾಣಿಯೂರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಅಣ್ಣ ನವೀಶ್ ಪ್ರಾಯ 38 ವರ್ಷ ಎಂಬವರು ಸುಮಾರು 10 ತಿಂಗಳಿನಿಂದ ಬಾಳಿಲ ಗ್ರಾಮದ ನಿಂತಿ...

ಪಿರ್ಯಾಧಿದಾರರಾದ ಪ್ರಶಾಂತ್ ಪ್ರಾಯ 30 ವರ್ಷ ಬಾರೆತ್ತಡಿ ಮನೆ ಕಾಣಿಯೂರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಅಣ್ಣ ನವೀಶ್ ಪ್ರಾಯ 38 ವರ್ಷ ಎಂಬವರು ಸುಮಾರು 10 ತಿಂಗಳಿನಿಂದ ಬಾಳಿಲ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಸ್ವಂತ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 15.10.2026 ರಂದು ರಾತ್ರಿ 08.00 ಗಂಟೆಗೆ ಹೋಟೆಲ್ ನ್ನು ಬಂದ್ ಮಾಡಿ ಅಲ್ಲೇ ಮಲಗಿದ್ದು ದಿನಾಂಕ: 16.10.2026 ರಂದು ಬೆಳಗ್ಗಿನ ಜಾವ 2.30 ಗಂಟೆಗೆ ಅಣ್ಣ ನವೀಶ್ ರವರು ತಮ್ಮ ಭರತ್ ರವರಿಗೆ ಪೋನ್ ಕರೆ ಮಾಡಿ ನನಗೆ ಹುಷರ್ ಇರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ ಕೂಡಲೇ ಫಿರ್ಯಾದಿದಾರರು ಹಾಗೂ ತಮ್ಮ ಭರತ್ ರವರು ಅಲ್ಲಿಗೆ ಹೋಗಿ ನೋಡಲಾಗಿ ಚಾಪೆ ಮೇಲೆ ಮಲಗಿದ್ದನು ನೋಡಿ ಫಿರ್ಯಾದಿದಾರರು ಮನೆಗೆ ವಾಪಾಸ್ಸು ಬಂದಿರುತ್ತಾರೆ. ದಿನಾಂಕ: 16.10.2026 ರಂದು ಬೆಳಿಗ್ಗೆ 6.30 ಗಂಟೆಗೆ ಹೋಟೆಲ್ ಗೆ ಹೋಗಿ ಫಿರ್ಯಾದಿದಾರರು ನೋಡಿದಾಗ ಅಣ್ಣ ನವೀಶ್ ರವರು ಮಲಗಿದಲ್ಲಿಯೇ ನರಳಾಡುತ್ತಿದ್ದನು ಕೂಡಲೇ ಆತನ್ನು 108 ಆಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿದಲ್ಲಿ ವೈದ್ಯರು ಪರೀಕ್ಷಿಸಿ ಅಣ್ಣ ನವೀಶ್ ರವರು ಬೆಳಿಗ್ಗೆ 7.40 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈತನಿಗೆ ಈ ಹಿಂದೆ ಕಿಡ್ನಿ ಸಮಸ್ಯೆ ಇದ್ದು ಯಾವುದೋ ಖಾಯಿಲೆಯಿಂದ ಅಥವಾ ಹೃದಯಘಾತದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು ಡಿ ಆರ್ ನ ನಂಬ್ರ: 28/2026 ಕಲಂ: 194 ಬಿ.ಎನ್.ಎಸ್.ಎಸ್. 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.




