ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಕರ್ನಾಟಕ

ಚಿತ್ರದುರ್ಗ: ಯುವಕನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ಮಂಗಳಮುಖಿಯರ ಬಂಧನ

– ಯುವಕನ ತೊಡೆಮೇಲೆ ಬಿಸಿನೀರು ಚೆಲ್ಲಿ, ಕೆಂಡದಿಂದ ಸುಟ್ಟು ಹಿಂಸೆ ಚಿತ್ರದುರ್ಗ: ಯುವಕನೋರ್ವನ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ (Surgery) ಮಾಡಿಸಿದ ಆರೋಪದ ಮೇಲೆ ಇಬ್ಬರು ಮಂಗಳಮುಖಿಯರನ್ನ (Trans...

· ಚಿತ್ರದುರ್ಗ
ಚಿತ್ರದುರ್ಗ | ಒತ್ತಾಯಪೂರ್ವಕವಾಗಿ ಯುವಕನ ಗುಪ್ತಾಂಗದ ಶಸ್ತ್ರಚಿಕಿತ್ಸೆ – ಇಬ್ಬರು ಮಂಗಳಮುಖಿಯರ ಬಂಧನ
ಹಂಚಿಕೊಳ್ಳಿ:

ಚಿತ್ರದುರ್ಗ ನಗರದಲ್ಲಿ ಯುವಕನೊಬ್ಬನಿಗೆ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ ಆರೋಪದ ಮೇಲೆ ಅನುಷ್ಕಾ ಮತ್ತು ನಳಿನಾ ಎಂಬ ಇಬ್ಬರು ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬುದ್ಧನಗರದ ನಿವಾಸಿಗಳಾದ ಇವರು, ಹೂವು ವ್ಯಾಪಾರಿ ಯುವಕನಿಗೆ ಪರಿಚಿತರಾಗಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ಯುವಕನ ತೊಡೆಯ ಮೇಲೆ ಬಿಸಿನೀರು ಮತ್ತು ಕೆಂಡದಿಂದ ಸುಟ್ಟು ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತ ಯುವಕನ ತಂದೆ ಅಕ್ಟೋಬರ್ 9 ರಂದು ನೀಡಿದ ದೂರಿನ ಮೇರೆಗೆ ಪರಶುರಾಂಪುರ ಠಾಣೆಯಿಂದ ಪ್ರಕರಣವನ್ನು ಚಿತ್ರದುರ್ಗ ನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: