ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ವಿಶ್ವ

ರಷ್ಯಾದಿಂದ ತೈಲ ಖರೀದಿ: ಭಾರತಕ್ಕೆ ಸುಂಕದ ಬಿಸಿ ತಪ್ಪಿಸಿದ ಅಮೆರಿಕ

ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ 100ರವರೆಗೆ ಸುಂಕ ವಿಧಿಸಲು ಮುಂದಾಗಿದ್ದ ಅಮೆರಿಕ ಇದೀಗ ಆ ನಿಲುವಿನಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ಸದ್ಯ...

ರಷ್ಯಾ ತೈಲ ಖರೀದಿ ವಿಚಾರದಲ್ಲಿ ಭಾರತಕ್ಕೆ ಅಮೆರಿಕದ ಬಿಗ್ ರಿಲೀಫ್: ಶೇ 100 ಸುಂಕದ ಆತಂಕಕ್ಕೆ ತಾತ್ಕಾಲಿಕ ವಿರಾಮ!
ಹಂಚಿಕೊಳ್ಳಿ:

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯಕ್ಕೆ ಕೈಬಿಟ್ಟಿದ್ದಾರೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ವಿನಾಯಿತಿ ನೀಡಲಾಗಿದ್ದು, ಈ ಸಂಬಂಧ ಸಂಸತ್ತಿಗೆ ಪ್ರಮಾಣಪತ್ರವನ್ನೂ ಸಲ್ಲಿಸಲಾಗಿದೆ. ಈ ನಿರ್ಧಾರದಿಂದ ಭಾರತದ ರಫ್ತು ವಹಿವಾಟಿನ ಮೇಲೆ ಬೀಳಬಹುದಾಗಿದ್ದ ಆರ್ಥಿಕ ಹೊರೆ ಮತ್ತು ಸುಂಕದ ಆತಂಕಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ. ಅಜರ್‌ಬೈಜಾನ್, ಹಂಗೇರಿ, ಚೀನಾ ಮತ್ತು ಸ್ಲೋವಾಕಿಯಾ ದೇಶಗಳಿಗೂ ಈ ವಿನಾಯಿತಿಯ ಲಾಭ ದೊರೆತಿದೆ.

ಹಂಚಿಕೊಳ್ಳಿ: