ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ವಿಶ್ವ

ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ: 16 ಮಂದಿ ಸಾವು, ನೂರಾರು ಮನೆಗಳು ಧ್ವಂಸ

ಬೀಜಿಂಗ್: ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 54 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7...

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!
ಹಂಚಿಕೊಳ್ಳಿ:

ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಸಂಭವಿಸಿದ 7.0 ತೀವ್ರತೆಯ ಭೂಕಂಪದಿಂದಾಗಿ 16 ಜನರು ಮೃತಪಟ್ಟಿದ್ದು, 54ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ 339 ಮನೆಗಳು ಹಾಗೂ 20 ಜಾನುವಾರು ಕೊಟ್ಟಿಗೆಗಳು ನೆಲಸಮವಾಗಿವೆ. ಸದ್ಯ 1,600ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಡೇರೆಗಳು ಮತ್ತು ಚಳಿಗಾಲದ ಉಡುಪುಗಳನ್ನು ತಲುಪಿಸಲಾಗುತ್ತಿದೆ. ಬಂಡೆಗಳು ಉರುಳಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 317ರಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಿಮಪಾತವಾಗುವ ಮುನ್ಸೂಚನೆಯು ಪರಿಹಾರ ಕಾರ್ಯಕ್ಕೆ ಅಡ್ಡಿಯಾಗುವ ಆತಂಕ ಮೂಡಿಸಿದೆ.

ಹಂಚಿಕೊಳ್ಳಿ: