ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಭಾರತ

ನಾಗ್ಪುರದಲ್ಲಿ ಮಾಡೆಲ್ ಶ್ರದ್ಧಾ ದುಬೆ ಬಂಧನ: ಲಖನೌದ ಶಿವ ಶರ್ಮಾ ಕೊಲೆ ಪ್ರಕರಣ

ಲಖನೌ: ಶಿವ ಶರ್ಮಾ ಶಂಕಿತ ಕೊಲೆ ಪ್ರಕರಣ ಮಹತ್ವದ ಬೆಳವಣೆಗೆ ನಡೆದಿದ್ದು ಘಟನೆಯ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಾಡೆಲ್ ಶ್ರದ್ಧಾ ದುಬೆಯನ್ನು ಉತ್ತರಪ್ರದೇಶ STF ನಾಗ್ಪುರದಲ್ಲಿ ಬಂಧಿಸಿದೆ. ಪೊಲೀಸರು ಆಕೆಯ ಸಹ...

ಉತ್ತರಪ್ರದೇಶ: ಪ್ರಿಯಕರನನ್ನು ಕೊಂದು 11 ದಿನಗಳಿಂದ ತಲೆಮರೆಸಿಕೊಂಡಿದ್ದ ಇನ್ಫ್ಲುಯೆನ್ಸರ್‌ನ ಬಂಧಿಸಿದ STF
ಹಂಚಿಕೊಳ್ಳಿ:

ಲಖನೌದ ಅವಧ್ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಶಿವ ಶರ್ಮಾ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಶ್ರದ್ಧಾ ದುಬೆಯನ್ನು ಉತ್ತರಪ್ರದೇಶದ ಎಸ್‌ಟಿಎಫ್ ನಾಗ್ಪುರದಲ್ಲಿ ಬಂಧಿಸಿದೆ. ಈ ಕಾರ್ಯಾಚರಣೆಯಲ್ಲಿ ಶ್ರದ್ಧಾಳ ಸಹೋದರಿ ರಶ್ಮಿ ದುಬೆ ಮತ್ತು ಚಾಲಕ ಡ್ಯಾನಿಶ್ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 9ರಂದು ನಡೆದ ಈ ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮೃತನ ತಾಯಿ ರಂಜನಾ ಶರ್ಮಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಕೊಲೆ ನಡೆದಿದೆಯೇ ಅಥವಾ ಇದು ಆತ್ಮಹತ್ಯೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಹಂಚಿಕೊಳ್ಳಿ: