ನ್ಯೂಯಾರ್ಕ್ನಲ್ಲಿ ಡಿ-ಕಂಪನಿ ಬಗ್ಗೆ ವಿಶ್ವಸಂಸ್ಥೆ ವರದಿಗೆ ಭಾರತ ತೀವ್ರ ಆಕ್ಷೇಪ
ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿಯನ್ನು ಭಾರತ ಮೂಲದ ಕ್ರಿಮಿನಲ್ ಗುಂಪು ಎಂದು ಬಣ್ಣಿಸಿದ್ದ ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರನ ಹೇಳಿಕೆಯನ್...

ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೇತೃತ್ವದ ಡಿ-ಕಂಪನಿಯನ್ನು ಭಾರತ ಮೂಲದ ಗುಂಪು ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಬೆನ್ ಸೌಲ್ ಬಣ್ಣಿಸಿರುವುದನ್ನು ಭಾರತ ಖಂಡಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿ ರಘು ಪುರಿ ಈ ವರದಿಯಲ್ಲಿನ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. 1993ರಿಂದ ದಾವೂದ್ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ ಎಂಬ ಸತ್ಯವನ್ನು ವರದಿಯಲ್ಲಿ ಕಡೆಗಣಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬೆನ್ ಸೌಲ್ ಅವರಿಗೆ ಚೀನಾ ಸರ್ಕಾರದಿಂದ 1,50,000 ಅಮೆರಿಕನ್ ಡಾಲರ್ ಆರ್ಥಿಕ ನೆರವು ಸಿಕ್ಕಿದೆ ಎಂಬ ಆರೋಪಗಳ ಬಗ್ಗೆಯೂ ಭಾರತ ಪ್ರಸ್ತಾಪಿಸಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕುರಿತ ಪಾಕಿಸ್ತಾನದ ಆರೋಪಗಳನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ.




