ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ವಿಶ್ವ

ಸೌದಿ ಅರೇಬಿಯಾದಲ್ಲಿ ಹೌತಿ ಬಂಡುಕೋರರ ಡ್ರೋನ್ ದಾಳಿ: ಸಿಬ್ಬಂದಿಗೆ ಮರಳಲು ಅಮೆರಿಕ ಆದೇಶ

ರಿಯಾದ್: ಸೌದಿ ಅರೇಬಿಯಾದ ತೈಲ ಸಂಸ್ಥೆ 'ಸೌದಿ ಅರಾಮ್ಕೋ'ದ ಪ್ರಮುಖ ತೈಲಕ್ಷೇತ್ರದ ಮೇಲೆ ನಡೆದ ಮಾರಕ ಡ್ರೋನ್ ದಾಳಿಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಭಾರಿ ರಾಜತಾಂತ್ರಿಕ ಸಂಚಲನ ಸೃಷ್ಟಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ...

ಸೌದಿಯಲ್ಲಿ ಹೌತಿ ಬಂಡುಕೋರರ ಅಟ್ಟಹಾಸ: ತೈಲಕ್ಷೇತ್ರದ ಮೇಲೆ ಡ್ರೋನ್ ದಾಳಿ, ದೇಶ ತೊರೆಯುವಂತೆ ರಾಯಭಾರ ಕಚೇರಿ ಸಿಬ್ಬಂದಿಗೆ ಅಮೆರಿಕ ತುರ್ತು ಆದೇಶ..!
ಹಂಚಿಕೊಳ್ಳಿ:

ಸೌದಿ ಅರೇಬಿಯಾದ ಶೈಬಾ ತೈಲಕ್ಷೇತ್ರದ ಮೇಲೆ ಹೌತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಉಂಟಾಗಿರುವ ಭದ್ರತಾ ಭೀತಿಯ ಹಿನ್ನೆಲೆಯಲ್ಲಿ, ಸೌದಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ತುರ್ತು ರಹಿತ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರು ತಕ್ಷಣವೇ ದೇಶ ತೊರೆಯುವಂತೆ ಅಮೆರಿಕ ಸರ್ಕಾರ ಆದೇಶಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆಯು ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಎಚ್ಚರಿಸಿದೆ. ಸೌದಿಯಲ್ಲಿರುವ ಅಮೆರಿಕದ ಸರ್ಕಾರಿ ನೌಕರರು ವಿಮಾನ ನಿಲ್ದಾಣಗಳನ್ನು ಬಳಸುವ ಮುನ್ನ ವಿಶೇಷ ಅನುಮತಿ ಕಡ್ಡಾಯಗೊಳಿಸಲಾಗಿದೆ.

ಹಂಚಿಕೊಳ್ಳಿ: