ನ್ಯೂಯಾರ್ಕ್‌ನಲ್ಲಿ ಭಾರತೀಯರೊಂದಿಗೆ ನವರಾತ್ರಿ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ ಜೋಹ್ರಾನ್ ಮಮ್ದಾನಿ
ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರು ನವರಾತ್ರಿ ಹಬ್ಬದಲ್ಲಿ ಭಾರತೀಯ ಸಮುದಾಯದೊಂದಿಗೆ ಗರ್ಬಾ ನೃತ್ಯ ಮಾಡಿ, ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರ ನೃತ್ಯದ ವಿಡಿಯೋ ವೈರಲ್ ಆಗಿದ್ದು, ಸಂಸ್ಕೃತಿಗಳ ಸಾಮರಸ್...

ನ್ಯೂಯಾರ್ಕ್‌ನಲ್ಲಿ ನಡೆದ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೋಹ್ರಾನ್ ಮಮ್ದಾನಿ ಅವರು ಸ್ಥಳೀಯ ಭಾರತೀಯ ಸಮುದಾಯದವರೊಂದಿಗೆ ಗರ್ಬಾ ನೃತ್ಯ ಮಾಡಿ ಸಂಭ್ರಮಿಸಿದರು. ಸಾಂಪ್ರದಾಯಿಕ ಉಡುಗೆಯೊಂದಿಗೆ ಹೆಜ್ಜೆ ಹಾಕಿದ ಬಳಿಕ ಅವರು ಹತ್ತಿರದ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಿವಿಧ ಹಬ್ಬಗಳ ಮೂಲಕ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಲಿ ಎಂದು ಅವರು ಹಾರೈಸಿದ್ದಾರೆ. ದಕ್ಷಿಣ ಏಷ್ಯಾದ ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರುವ ಕ್ವೀನ್ಸ್ ಕ್ಷೇತ್ರದ ಪ್ರತಿನಿಧಿಯಾದ ಮಮ್ದಾನಿ, ಈ ಹಿಂದೆಯೂ ಹಲವು ಭಾರತೀಯ ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.




