ಮುಖ್ಯ ವಿಷಯಕ್ಕೆ ಹೋಗಿ
The Karnataka Today
12 Oct
ಸುದ್ದಿ
ಕ್ರೀಡೆ

ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಆಯ್ಕೆ ಬೆನ್ನಲ್ಲೇ ಗುಡುಗಿದ ಮೊಹಮ್ಮದ್ ಶಮಿ..! ಆಯ್ಕೆ ಸಮಿತಿಗೂ ವಾರ್ನಿಂಗ್ ಕೊಟ್ಟ ವೇಗಿ

ಅಜಿತ್ ಅಗರ್ಕರ್ ನಿರ್ಗಮನದ ಬಳಿಕ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಉತ್ತಮ ಪ್ರದರ್ಶನ ನೀಡಿದರೂ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಮೊಹಮ್ಮದ್ ಶಮಿ ಮೌನ ಮುರಿದಿದ್ದಾರೆ. ರಣಜಿ ಟ್ರ...

· ಬೆಂಗಳೂರು ನಗರ
ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಆಯ್ಕೆ ಬೆನ್ನಲ್ಲೇ ಗುಡುಗಿದ ಮೊಹಮ್ಮದ್ ಶಮಿ..! ಆಯ್ಕೆ ಸಮಿತಿಗೂ ವಾರ್ನಿಂಗ್ ಕೊಟ್ಟ ವೇಗಿ
ಹಂಚಿಕೊಳ್ಳಿ:

ಬೆಂಗಳೂರು: ಕಳೆದು ವಾರದಲ್ಲಿ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಬೆಳವಣಿಗಳು ನಡೆಯುತ್ತಿವೆ. ಅಜಿತ್ ಅಗರ್ಕರ್ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆಯೇ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಕಳೆದೆರಡು ಸೀಸನ್‌ನಲ್ಲಿ ಭುವಿ ಅದ್ಭುತ ಪ್ರದರ್ಶನ ನೀಡಿದ್ದರೂ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಭುವನೇಶ್ವರ್ ಕುಮಾರ್ ಅವರನ್ನು ಟೀಂ ಇಂಡಿಯಾ ಆಯ್ಕೆಗೆ ಪರಿಗಣಿಸಿರಲಿಲ್ಲ. ಆದರೆ ಪ್ರಗ್ಯಾನ್ ಓಜಾ ನೇತೃತ್ವದ ಆಯ್ಕೆ ಸಮಿತಿಯು ಇದೀಗ ಭುವಿಗೆ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಗೆ ಮಣೆಹಾಕಿದೆ.

ಇನ್ನು ಮೊಹಮ್ಮದ್ ಶಮಿ ಪರಿಸ್ಥಿತಿ ಕೂಡಾ ಭುವಿಗಿಂತ ಭಿನ್ನವಾಗಿಲ್ಲ. 2025ರ ಐಸಿಸಿ ಚಾಂಪಿಯನ್ಸ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮೊಹಮ್ಮದ್ ಶಮಿ, ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ ಗಾಯದಿಂದ ಚೇತರಿಸಿಕೊಂಡು ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದರೂ, ಆಯ್ಕೆ ಸಮಿತಿ ಶಮಿಯನ್ನು ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡದೇ ಹೊರಗಿಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಕೊನೆಗೂ ಮೊಹಮ್ಮದ್ ಶಮಿ ಮೌನ ಮುರಿದಿದ್ದಾರೆ.

RevSportz ವೆಬ್‌ಸೈಟ್ ಜತೆ ಮಾತನಾಡಿರುವ ಶಮಿ, 'ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಆಡಲು ಅವಕಾಶ ಸಿಕ್ಕಿದ್ದು, ಅವರ ಪಾಲಿಗೆ ಒಳ್ಳೆಯದು. ಆದರೆ ನನ್ನನ್ನು ಸೆಲೆಕ್ಟ್ ಮಾಡದೇ ಇರುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ನನಗೆ ಅವಕಾಶ ಸಿಗುತ್ತೋ ಆಗ ನಾನು ಆಡುತ್ತೇನೆ. ನನ್ನಿಂದ ಎಷ್ಟು ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವೋ ಅದನ್ನು ಮಾಡುತ್ತೇನೆ. ಸದ್ಯ ನನ್ನ ಗುರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಚೆನ್ನಾಗಿ ಪ್ರದರ್ಶನ ನೀಡುವುದಾಗಿದೆ' ಎಂದು ಶಮಿ ಹೇಳಿದ್ದರು.

ನನಗೇನೂ ನಷ್ಟವಿಲ್ಲ..!

ನನ್ನ ಜತೆಗೂ ಕಳೆದ ಎರಡು ಮೂರು ವರ್ಷಗಳಿಂದಲೂ ಹೀಗೆಯೇ ಆಗುತ್ತಿದೆ. ನಾನು ಬಂಗಾಳ ತಂಡದ ಪರ ಚೆನ್ನಾಗಿಯೇ ಆಡುತ್ತಿದ್ದೇನೆ ಹಾಗೆಯೇ ಫಿಟ್ನೆಸ್ ಕೂಡಾ ಸಾಬೀತು ಮಾಡಿದ್ದೇನೆ. ನಾನು ಭಾರತ ಪರ ಆಡಲು ಅವಕಾಶ ಸಿಕ್ಕಿಲ್ಲವೆಂದರೇ ಅದು ನನ್ನ ನಷ್ಟವಂತೂ ಅಲ್ಲ ಎಂದು ಖಡಕ್ ಆಗಿಯೇ ಶಮಿ ಉತ್ತರಿಸಿದ್ದಾರೆ.

ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ಶಮಿ ಆರ್ಭಟ; ಆಯ್ಕೆ ಸಮಿತಿಗೂ ಖಡಕ್ ವಾರ್ನಿಂಗ್

ಇನ್ನು ರಣಜಿ ಟ್ರೋಫಿ ಟೂರ್ನಿಯ ಗ್ರೂಪ್ 'ಸಿ'ಯಲ್ಲಿ ಸ್ಥಾನ ಪಡೆದಿರುವ ಬಂಗಾಳ ತಂಡವು ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡದ ಎದುರು ಕಣಕ್ಕಿಳಿದಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಬಂಗಾಳ ತಂಡಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಶಮಿ ಕೇವಲ 30 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ತಂಡವು ಕೇವಲ 240 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಷ್ಟೇ ಅಲ್ಲದೇ ತಮ್ಮಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದೆ. ನಾನು ಭಾರತ ಪರ ಆಡಲು ರೆಡಿಯಿದ್ದೇನೆ ಎನ್ನುವ ಖಡಕ್ ಸಂದೇಶವನ್ನು ಶಮಿ, ಟೀಂ ಇಂಡಿಯಾ ಆಯ್ಕೆ ಸಮಿತಿಗೆ ರವಾನಿಸಿದ್ದಾರೆ. ಮುಂಬರುವ ಕಿವೀಸ್ ಎದುರಿನ ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿಗೆ ಶಮಿ ಆಯ್ಕೆಯಾಗುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಹಂಚಿಕೊಳ್ಳಿ: