ಐಪಿಎಲ್ 2027 ಹರಾಜು, ಫ್ರಾಂಚೈಸಿಗಳಿಂದ 10 ಸ್ಟಾರ್ ಬ್ಯಾಟರ್ ರಿಲೀಸ್‌ಗೆ ನಿರ್ಧಾರ, ಲಿಸ್ಟ್‌ನಲ್ಲಿ ಅಚ್ಚರಿ
ಐಪಿಎಲ್ 2027 ಹರಾಜು ಪ್ರಕ್ರಿಯೆ ತಯಾರಿ ಆರಂಭಗೊಂಡಿದೆ. ಇದೀಗ 10 ತಂಡಗಳು ರಿಲೀಸ್ ಮಾಡಲಿರುವ ಆಟಗಾರರ ಲಿಸ್ಟ್ ಬಹುತೇಕ ಅಂತಿಮಗೊಂಡಿದೆ. ಈ ಪಟ್ಟಿಯಲ್ಲಿ ಹತ್ತು ಅಚ್ಚರಿ ಹೆಸರುಗಳಿವೆ.

ನವದೆಹಲಿ (ಅ.11) ಐಪಿಎಲ್ ಕೂಟದ ಸಿದ್ಧತೆಯಲ್ಲಿರುವ ತಂಡಗಳು ಈಗ ಆಟಗಾರರ ಬಿಡುಗಡೆ, ಉಳಿಸಿಕೊಳ್ಳುವಿಕೆ ಹಾಗೂ ಹರಾಜು ಪ್ರಕ್ರಿಯೆಗೆ ಸಜ್ಜಾಗುತ್ತಿವೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಐಪಿಎಲ್ 2027 ಹರಾಜು ನಡೆಯಲಿದೆ. ಕೆಲವೇ ದಿನಗಳಲ್ಲಿ ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಳ್ಳುವಿಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಬಾರಿಯ ಬಿಡುಗಡೆ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳಿವೆ. ಅದರಲ್ಲೂ 10 ಜನ ಸ್ಟಾರ್ ಬ್ಯಾಟರ್‌ಗಳು ಈ ಬಾರಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿರುವ 10 ಆಟಗಾರರ ಹೆಸರು ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡುವುದು ಖಚಿತ.
ಐಪಿಎಲ್ 2027 ಟೂರ್ನಿಯ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಂಡದಿಂದ ಹೊರಹಾಕಲಿರುವ ಆಟಗಾರರ ಪೈಕಿ 10 ಜನ ಸ್ಟಾರ್ ಬ್ಯಾಟರ್‌ಗಳು ಇದ್ದಾರೆ ಎಂದು ವರದಿಯಾಗಿದೆ. ಈ ಬಾರಿ ಬಿಡುಗಡೆ ಪಟ್ಟಿಯಲ್ಲಿರುವ ಸಂಭಾವ್ಯ 10 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.
10 ಫ್ರಾಂಚೈಸಿಗಳ ರಿಲೀಸ್ ಪಟ್ಟಿಯಲ್ಲಿರುವ ಸಂಭಾವ್ಯ ಬ್ಯಾಟರ್
ಸೂರ್ಯಕುಮಾರ್ ಯಾದವ್ ರಾಹುಲ್ ಟಿವಾಟಿಯಾ ಪೃಥ್ವಿ ಶಾ ಜೆಕಬ್ ಬೆಥಲ್ ಸರ್ಫರಾಜ್ ಖಾನ್ ಆ್ಯಡಿನ್ ಮರ್ಕ್ರಮ್ ಅಜಿಂಕ್ಯ ರಹಾನೆ ಶಿಮ್ರೊನ್ ಹೆಟ್ಮೆಯರ್ ಶೆರ್ಫಾನೆ ರುದರ್‌ಫೋರ್ಡ್ ಅಬ್ದುಲ್ ಸಮಾದ್ಆರ್‌ಸಿಬಿ ಸ್ಟಾರ್ ಬ್ಯಾಟರ್ ಔಟ್ ಸಾಧ್ಯತೆ
ಫ್ರಾಂಚೈಸಿಗಳ ಸಂಭಾವ್ಯ ಆಟಗಾರರ ಬಿಡುಗಡೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಸ್ಟಾರ್ ಬ್ಯಾಟರ್‌ಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೇಕಬ್ ಬೆಥಲ್ ಕೂಡ ಸೇರಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ಜೇಕಬ್ ಬೆಥಲ್ ತಂಡದಲ್ಲಿದ್ದರು. ಆರಂಭದಲ್ಲಿ ಬೆಂಚ್ ಕಾದಿದ್ದ ಜೇಕಬ್ ಬೆಥಲ್ ನಂತರ ಅವಕಾಶ ಪಡೆದಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಅವರು ವಿಫಲರಾದರು. ಈ ಬಾರಿಯ ಐಪಿಎಲ್ ಟೂರ್ನಿಗೂ ಮೊದಲು ಜೇಕಬ್ ಬೆಥಲ್ ಅವರನ್ನು ಕೈಬಿಡಲು ಆರ್‌ಸಿಬಿ ನಿರ್ಧರಿಸುವ ಸಾಧ್ಯತೆಯಿದೆ. ಜೇಕಬ್ ಬೆಥಲ್ 2027ರ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
2026ರ ಟಿ20 ವಿಶ್ವಕಪ್ ವರೆಗೆ ಸೂರ್ಯಕುಮಾರ್ ಯಾದವ್ ಕಿಂಗ್ ಆಗಿದ್ದರು. ಟೀಂ ಇಂಡಿಯಾ ಟಿ20 ನಾಯಕ, ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೇರಿದಂತೆ ಹಲವು ಕೀರ್ತಿಗಳು ಅವರ ಹೆಸರಿನಲ್ಲಿದ್ದವು. ಆದರೆ 2026 ಐಪಿಎಲ್ ಟೂರ್ನಿಯಿಂದ ಸೂರ್ಯಕುಮಾರ್ ಯಾದವ್ ಅವರ ಕಳಪೆ ಕಾಲ ಆರಂಭಗೊಂಡಿತು. 2026ರ ಐಪಿಎಲ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಕಳಪೆ ಆಟ ಪ್ರದರ್ಶಿಸಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವದಿಂದ ಮಾತ್ರವಲ್ಲದೆ ತಂಡದಿಂದಲೂ ಅವರು ಹೊರಬಿದ್ದರು. ಇದೀಗ ಮುಂಬೈ ಇಂಡಿಯನ್ಸ್ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.




