ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಸುದ್ದಿ

ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನ: ಅಕ್ಟೋಬರ್‌ 10 ರಿಂದ 21ರ ತನಕ 55ನೇ ವರ್ಷದ ಶರನ್ನವರಾತ್ರಿ ಮಹೋತ್ಸವ.

ಮುದ್ರಾಡಿ: ಮುದ್ರಾಡಿ ನಾಟ್ಕದೂರು ಶ್ರೀ ಅಭಯಹಸ್ತೆ ಆದಿಶಕ್ತಿ ಮತ್ತು ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಧರ್ಮದೈವಗಳು, ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ 55ನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್‌ 10 ರಿಂದ...

· 2 ನಿಮಿಷ ಓದು
ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನ: ಅಕ್ಟೋಬರ್‌ 10 ರಿಂದ 21ರ ತನಕ 55ನೇ ವರ್ಷದ ಶರನ್ನವರಾತ್ರಿ ಮಹೋತ್ಸವ.
ಹಂಚಿಕೊಳ್ಳಿ:

ಮುದ್ರಾಡಿ: ಮುದ್ರಾಡಿ ನಾಟ್ಕದೂರು ಶ್ರೀ ಅಭಯಹಸ್ತೆ ಆದಿಶಕ್ತಿ ಮತ್ತು ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಧರ್ಮದೈವಗಳು, ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ 55ನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್‌ 10 ರಿಂದ 21 ರ ತನಕ ವೈಭವದಿಂದ ನಡೆಯಲಿದೆ.

ಅಕ್ಟೋಬರ್‌ 10ರಂದು ಭಜನೆಯ ಮೂಲಕ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿದೆ.
ಪೀಠಾರೋಹಣದ ಧಾರ್ಮಿಕ ಪೂಜೆ: 11 ರಂದು ಮುದ್ರಾಡಿ ಶ್ರೀಕ್ಷೇತ್ರದ ಸಂಸ್ಥಾಪಕ ಧರ್ಮಯೋಗಿ ಮೋಹನ್‌ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಿಜಯಕೀರ್ತಿ ಶ್ರೀ ಧರ್ಮಯೋಗಿ ಸುಕುಮಾರ್‌ ಮೋಹನ್‌ ಅವರ ಪಂಚಮ ವರ್ಷದ ಪೀಠಾರೋಹಣದ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ.

ಭಾನುವಾರ ಉದಯಕಾಲದಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಹೋಮ ಶ್ರೀಸತ್ಯನಾರಾಯಣ ಪೂಜೆ, ನಂದಿಕೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಚಂಡಿಕಾಹೋಮ, ಮಧ್ಯಾಹ್ನ ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಭಜನೆ, ರಂಗಪೂಜೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಪ್ರತಿ ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಚಂಡಿಕಾಹೋಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನವೂ ಸಂಜೆ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
21 ರಂದು ಸಂಜೆ 7 ರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್‌ ಮೋಹನ್‌ ತಿಳಿಸಿದ್ದಾರೆ.

ಹಂಚಿಕೊಳ್ಳಿ: