ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಸುದ್ದಿ

ಈದು ಅಶೋಕ್ ಕುಮಾರ್ ಜೈನ್ ರಿಗೆ ಕಂಬಳ ಅಕಾಡೆಮಿ ಪ್ರಶಸ್ತಿ

ಕಂಬಳ ಕ್ಷೇತ್ರದಲ್ಲಿನ ಹಿರಿಯ ಓಟಗಾರರಾದ ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ರವರು 2026 ನೇ ಸಾಲಿನ ‘ಕಂಬಳ ಅಕಾಡೆಮಿ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ದ.ಕ,ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರ...

· 1 ನಿಮಿಷ ಓದು· ದಕ್ಷಿಣ ಕನ್ನಡ
ಈದು ಅಶೋಕ್ ಕುಮಾರ್ ಜೈನ್ ರಿಗೆ ಕಂಬಳ ಅಕಾಡೆಮಿ ಪ್ರಶಸ್ತಿ
ಹಂಚಿಕೊಳ್ಳಿ:

ಕಂಬಳ ಕ್ಷೇತ್ರದಲ್ಲಿನ ಹಿರಿಯ ಓಟಗಾರರಾದ ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ರವರು 2026 ನೇ ಸಾಲಿನ ‘ಕಂಬಳ ಅಕಾಡೆಮಿ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ.

 

 

ದ.ಕ,ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ,ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಕೊಡಲ್ಪಡುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಅ.8 ಗುರುವಾರ ಬೆಳಿಗ್ಗೆ 11-30ಕ್ಕೆ ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿದೆ.

 

ಕಂಬಳ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಅಶೋಕ್ ಕುಮಾರ್ ಜೈನ್ ರವರು ಬಹಳ ಪರಿಣತಿ ಪಡೆದವರು. ಈದು ಗ್ರಾಮದಲ್ಲಿ ದಶಕಗಳ ಕಾಲ ಕಂಬಳ ಕ್ರೀಡೆ ಮಾಡುವ ಮೂಲಕ ಸಂಘಟನಾತ್ಮಕ ಚಿಂತನೆ ಮಾಡಿದ್ದರು.

 

ಈದು ಮುಜಿಲ್ನಯ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರರಾಗಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯವನ್ನು ನಿರಂತರ ಮಾಡುವಲ್ಲಿ ಕೂಡಾ ಶ್ರಮ ವಹಿಸಿದ್ದರು.

ಹಂಚಿಕೊಳ್ಳಿ: