ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ವಿಶ್ವ

ಹೆಲಿಕಾಪ್ಟರ್‌ನಿಂದ ಇಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video!

ಮೇರಿಲ್ಯಾಂಡ್‌ನ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಹೆಲಿಕಾಪ್ಟರ್‌ನಿಂದ ಇಳಿಯುವಾಗ ಅಮೆರಿಕದ ಎರಡನೇ ಮಹಿಳೆ ಉಷಾ ವ್ಯಾನ್ಸ್ ಎಡವಿದ್ದರು. ಅದೃಷ್ಟವಶಾತ್ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಎರಡು ತಿಂಗಳ...

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video
ಹಂಚಿಕೊಳ್ಳಿ:

ಅಮೆರಿಕದ ಎರಡನೇ ಮಹಿಳೆ ಉಷಾ ವ್ಯಾನ್ಸ್ ಮೇರಿಲ್ಯಾಂಡ್‌ನ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಹೆಲಿಕಾಪ್ಟರ್‌ನಿಂದ ಕೆಳಗಿಳಿಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದರು. ಅದೃಷ್ಟವಶಾತ್ ಅವರು ಕೆಳಗೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆ ಸಮಯದಲ್ಲಿ ಅವರು ತಮ್ಮ ಎರಡು ತಿಂಗಳ ಮಗ ಅಲೆಕ್ ನೀಲ್ ವ್ಯಾನ್ಸ್‌ನನ್ನು ಎತ್ತಿಕೊಂಡಿದ್ದರು. ಅಚ್ಚರಿಯ ವಿಷಯವೆಂದರೆ, ಕೆಲವೇ ಅಡಿಗಳ ಅಂತರದಲ್ಲಿದ್ದ ಭದ್ರತಾ ಅಧಿಕಾರಿಗಳು ಅವರಿಗೆ ನೆರವಾಗಲು ಮುಂದಾಗದೆ ತಮ್ಮ ಜಾಗದಲ್ಲೇ ಸ್ಥಿರವಾಗಿ ನಿಂತಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ವ್ಯಾನ್ಸ್ ಹೆಲಿಕಾಪ್ಟರ್‌ನ ಮೆಟ್ಟಿಲುಗಳ ತುದಿಯಲ್ಲಿ ಜಾರಿಬೀಳುತ್ತಿರುವುದು ದಾಖಲಾಗಿದೆ. ತಕ್ಷಣವೇ ರೇಲಿಂಗ್ ಅನ್ನು ಹಿಡಿದುಕೊಂಡು ಅವರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಉಷಾ ಎಡವಿದಾಗ ಹತ್ತಿರದಲ್ಲಿದ್ದ ಭದ್ರತಾ ಸಿಬ್ಬಂದಿ ಏಕೆ ಸಹಾಯಕ್ಕೆ ಬರಲಿಲ್ಲ ಎಂದು ಹಲವು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಆದರೂ, ಅವರು ಏಕೆ ಮಧ್ಯಪ್ರವೇಶಿಸಲಿಲ್ಲ ಅಥವಾ ಯಾವುದಾದರೂ ಭದ್ರತಾ ಪ್ರೋಟೋಕಾಲ್‌ಗಳು ಇದಕ್ಕೆ ಕಾರಣವೇ ಎಂಬುದು ವೀಡಿಯೊದಿಂದ ಸ್ಪಷ್ಟವಾಗಿಲ್ಲ.

ಉಪಾಧ್ಯಕ್ಷ ಜೇಮ್ಸ್ ಡೇವಿಡ್ ವ್ಯಾನ್ಸ್ ಅವರು ತಮ್ಮ ನಾಲ್ಕು ವರ್ಷದ ಮಗಳು ಮಿರಾಬೆಲ್ಲೆಯನ್ನು ಹೊತ್ತುಕೊಂಡು ಹೆಲಿಕಾಪ್ಟರ್‌ನಿಂದ ಕೆಳಗಿಳಿದು ಮುಂದೆ ತೆರಳಿದ ನಂತರ ಈ ಘಟನೆ ಸಂಭವಿಸಿದೆ. ವ್ಯಾನ್ಸ್ ಮಧ್ಯಂತರ ಚುನಾವಣೆಯ ಪ್ರಚಾರ ಪ್ರವಾಸಕ್ಕಾಗಿ ಅಲಾಸ್ಕಾಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಡೆಮೋಕ್ರಾಟ್ ಮೇರಿ ಪೆಲ್ಟೋಲಾ ಅವರನ್ನು ಎದುರಿಸುತ್ತಿರುವ ರಿಪಬ್ಲಿಕನ್ ಸೆನೆಟರ್ ಡಾನ್ ಸುಲ್ಲಿವನ್ ಬೆಂಬಲಿತ ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ರ್ಯಾಲಿಯಲ್ಲಿ ಮಾತನಾಡಲಿದ್ದಾರೆ.

ಫ್ಲೈದುಬೈ 'ಹೀರೋ' ಸ್ಮಿತ್ ಮಚ್ಚರ್ ತಲೆಬುರುಡೆಯಲ್ಲಿ ಮೂಳೆ ಮುರಿತ: ಸೌದಿಯಲ್ಲಿ ತುರ್ತು ಶಸ್ತ್ರಚಿಕಿತ್ಸೆ!

ಏರ್ ಫೋರ್ಸ್ ಟು ಹತ್ತುವ ಮುನ್ನ, ಉಷಾ ಮತ್ತು ತಮ್ಮ ಕೆಲವು ಮಕ್ಕಳು ತಮ್ಮೊಂದಿಗೆ ಆಗಮಿಸುತ್ತಿದ್ದಾರೆ ಎಂದು ವ್ಯಾನ್ಸ್ ತಿಳಿಸಿದ್ದರು. ಈ ಪ್ರವಾಸದ ಮೂಲಕ ಎಲ್ಲಾ 50 ರಾಜ್ಯಗಳಿಗೆ ಭೇಟಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದ್ದರು. 7.5 ಗಂಟೆಗಳ ಈ ಪ್ರಯಾಣಕ್ಕಾಗಿ ಅವರು ತಮ್ಮ ಒಂಬತ್ತು ವಾರಗಳ ಮಗುವನ್ನು ಕರೆದೊಯ್ಯುತ್ತಿದ್ದಾರೆ.

ಜುಲೈ 19 ರಂದು ಮೇರಿಲ್ಯಾಂಡ್‌ನ ಬೆಥೆಸ್ಡಾದಲ್ಲಿರುವ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಅಲೆಕ್ ಜನಿಸಿದ್ದರು. ದಂಪತಿಗೆ ಅಲೆಕ್ ನಾಲ್ಕನೇ ಮಗು. ಉಷಾ-ವ್ಯಾನ್ಸ್ ದಂಪತಿಗೆ ಈಗಾಗಲೇ ಇವಾನ್ (9), ವಿವೇಕ್ (6) ಮತ್ತು ಮಿರಾಬೆಲ್ (4) ಎಂಬ ಮಕ್ಕಳಿದ್ದಾರೆ.

Usha Vance nearly crushed her new baby. Glad he’s ok.

ಹಂಚಿಕೊಳ್ಳಿ: