ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಸುದ್ದಿ

 ಅ. 11 ರಿಂದ 22ರ ವರೆಗೆ .ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆಯಿಂದ 26ನೇ ವರ್ಷದ ನವರಂಗೋತ್ಸವ.

ಹಲವರಿಗೆ ಪ್ರಶಸ್ತಿ ಪ್ರದಾನ-ನಾಟಕ, ಯಕ್ಷಗಾನ, ತಾಳಮದ್ದಳೆ. ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷ...

· ಬೆಂಗಳೂರು ನಗರ
 ಅ. 11 ರಿಂದ 22ರ ವರೆಗೆ .ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆಯಿಂದ 26ನೇ ವರ್ಷದ ನವರಂಗೋತ್ಸವ.
ಹಂಚಿಕೊಳ್ಳಿ:

ಹಲವರಿಗೆ ಪ್ರಶಸ್ತಿ ಪ್ರದಾನ-ನಾಟಕ, ಯಕ್ಷಗಾನ, ತಾಳಮದ್ದಳೆ.

ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರದಲ್ಲಿ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮ ಅಕ್ಟೋಬರ್‌ 11 ರಿಂದ 22 ರ ತನಕ ನಡೆಯಲಿದೆ. 11 ರಂದು ಸಂಜೆ ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನವರಂಗೋತ್ಸವ ಉದ್ಘಾಟಿಸುವರು. ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ ಕುಮಾರ್‌, ಕರ್ನಾಟಕ ಕ್ವಾರಿ ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಮುದ್ರಾಡಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಗಣಪತಿ ಎಂ ಉಪಸ್ಥಿತರಿರುವರು.

11 ರಂದು ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆಯಿಂದ ಗುರುರಾಜ್‌ ಮಾರ್ಪಳ್ಳಿ ರಚಿಸಿ ನಿರ್ದೇಶಿಸಿದ ಅವ್ವ ನನ್ನವ್ವ ನಾಟಕದ 500ನೇ ಪ್ರದರ್ಶನ ನಡೆಯಲಿದೆ. 12 ರಂದು ಭೂಮಿಕ ಹಾರಾಡಿ ತಂಡದಿಂದ ರಾಮ ಶೆಟ್ಟಿ ಹಾರಾಡಿ ರಚಿಸಿ ನಿರ್ದೇಶಿಸಿದ ಸುಯೋಧನ ನಾಟಕ, 13ರಂದು ರಂಗಪಯಣ ತಂಡದಿಂದ ನಯನ ಸೂಡ ರಚಿಸಿ ನಿರ್ದೇಶಿಸಿದ ಬಿದ್ದೂರಿನ ಬಿನ್‌ ಬೆನ್‌ ನಾಟಕ, 14 ರಂದು ಸಾತ್ವಿಕ ತಂಡದಿಂದ ರಾಜ್‌ ಗುರು ರಚಿಸಿ ನಿರ್ದೇಶೀಸಿದ “ಏಕವ್ಯಕ್ತಿ 55 ನಿಮಿಷದ ಪ್ರೇಮ ಕಥೆ” ಪ್ರದರ್ಶನಗೊಳ್ಳಲಿದೆ. 15 ರಂದು ಹೆಬ್ರಿಯ ಡಾ. ಸುಲತಾ ವಿದ್ಯಾಧರ ಹೆಗ್ಡೆ ಮತ್ತು ಬಳಗ ಮೂಡಬಿದರೆ ತಂಡದಿಂದ ತಾಳಮದ್ದಳೆ ಕಂಸವಧೆ ನಡೆಯಲಿದೆ. ಡಾ. ಶ್ರೇಯಸ್‌ ನಾಯಕ್‌ ಮುದ್ರಾಡಿ ಭಾಗವತಿಕೆ ಮಾಡಲಿದ್ದಾರೆ. 16ರಂದು ಕನ್ನಾರು ಲಕ್ಷ್ಮೀನಾರಾಯಣ ಪೈ ಬಳಗ ಪೇತ್ರಿ ತಂಡದಿಂದ ಸುರೇಶ ಮರಕಾಲ ಭಾಗವತಿಕೆಯಲ್ಲಿ ಕರ್ಣ ಭೇಧನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. 17 ರಂದು ಕೆಎಸ್‌ ಡಿಎಲ್‌ ಚಂದ್ರು ನಿರ್ದೇಶನದಲ್ಲಿ ರೂಪಾಂತರ ತಂಡದಿಂದ ಏಕವ್ಯಕ್ತಿ ಮಿನುಗುತಾರೆ ನಡೆಯಲಿದೆ. 18 ರಂದು ಕೆಎಸ್‌ ಡಿಎಲ್‌ ಚಂದ್ರು ನಿರ್ದೇಶನದಲ್ಲಿ ಬಸವರಾಜ್‌ ಸೂಳೇರಿಪಾಳ್ಯ ರಚನೆಯ ರೂಪಾಂತರ ತಂಡದಿಂದ ಏಕವ್ಯಕ್ತಿ – ಭೀಷ್ಮʼ ಪ್ರದರ್ಶನ ನಡೆಯಲಿದೆ. 19 ರಂದು ಸೀತಾನದಿ ನಾಗೇಶ ನಾಯಕ್‌ ಮತ್ತು ಬಳಗ ಹೆಬ್ರಿ ಅವರಿಂದ ಪ್ರವೀಣ್‌ ಸೂಡ ಕೆರೆಬೆಟ್ಟು ಅವರ ಭಾಗವತಿಕೆಯಲ್ಲಿ ” ಭೀಷ್ಮ ಸೇನಾಧಿಪತ್ಯ” ತಾಳಮದ್ದಳೆ ನಡೆಯಲಿದೆ. 20 ರಂದು ಸಂಜೆ 7 ರಿಂದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ” ಸೀತಾ ನಿರ್ಯಾಣ” ಯಕ್ಷಗಾನ ಬಯಲಾಟ ಹಾಗೂ 21 ರಂದು 7 ಗಂಟೆಗೆ ” ಸಂಪೂರ್ಣ ಶ್ರೀದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶನಗೊಳಲಿದೆ ಎಂದು ನಾಟ್ಕ ಮುದ್ರಾಡಿ ಅಧ್ಯಕ್ಷ ಸುಕುಮಾರ್‌ ಮೋಹನ್‌ ತಿಳಿಸಿದ್ದಾರೆ.

20 ರಂದು ನವರಂಗೋತ್ಸವದ ಸಮಾರೋಪ : ಅಕ್ಟೋಬರ್‌ 20ರಂದು ನವರಂಗೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಯೋಧ್ಯ ಉದ್ಯಮಿ ಪ್ರಭಾಕರ ಶೇಖರ ಶೆಟ್ಟಿ, ಯಕ್ಷಗಾನ ಪ್ರಸಂಗಕರ್ತ ಪಿ.ವಿ.ಅನಂದ ಸಾಲಿಗ್ರಾಮ ಭಾಗವಹಿಸುವರು.

ಹಂಚಿಕೊಳ್ಳಿ: