ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಸುದ್ದಿ

ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಹಾಗೂ ಲಯನ್ಸ್ ಕ್ಲಬ್ ಆಗುಂಬೆ ಇಂಟರ್ ಡಿಸ್ಟ್ರಿಕ್ಟ್ ಟ್ವಿನ್ನಿಂಗ್ ಕಾರ್ಯಕ್ರಮ

ಹೆಬ್ರಿಯ ಚಾರ ಗಾಂಧಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಹೆಬ್ರಿಸಿಟಿ ಹಾಗೂ ಲಯನ್ಸ್ ಕ್ಲಬ್ ಆಗುಂಬೆ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ಶಾಲೆಗೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ ಆ...

· ಉಡುಪಿ
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಹಾಗೂ ಲಯನ್ಸ್ ಕ್ಲಬ್ ಆಗುಂಬೆ ಇಂಟರ್ ಡಿಸ್ಟ್ರಿಕ್ಟ್ ಟ್ವಿನ್ನಿಂಗ್ ಕಾರ್ಯಕ್ರಮ
ಹಂಚಿಕೊಳ್ಳಿ:

ಹೆಬ್ರಿಯ ಚಾರ ಗಾಂಧಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಹೆಬ್ರಿಸಿಟಿ ಹಾಗೂ ಲಯನ್ಸ್ ಕ್ಲಬ್ ಆಗುಂಬೆ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ಶಾಲೆಗೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ ಆಗುಂಬೆ ವತಿಯಿಂದ ಶಾಲೆಗೆ ಹೊಸ ಟಿವಿ, ಗ್ರೀನ್ ಬೋರ್ಡ್ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ರೂವಾರಿ ಕ್ಲಬ್ಬಿನ ಹಿರಿಯ ಸದಸ್ಯೆಯಾಗಿ ತನ್ನ ಅಧ್ಯಕ್ಷತೆಯ ಸಮಯದಲ್ಲಿ ಹತ್ತು ಹಲವು ಸೇವಾ ಕಾರ್ಯಗಳ ಮೂಲಕ ಕ್ಲಬ್ಬಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟ ಡಾ. ಭಾರ್ಗವಿ ಐತಾಳ್ ಅವರನ್ನು ಎಲ್ಲಾ ಸಂಘಟನೆಗಳ ಪರವಾಗಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷ ಹರೀಶ್ ಶೆಟ್ಟಿ ನಾಡ್ಪಾಲು, ಕಾರ್ಯದರ್ಶಿ ರಘುರಾಮ್ ಶೆಟ್ಟಿ, ನಾಗೇಶ್ ನಾಯಕ್ ಸೀತಾನದಿ, ಲಯನ್ಸ್ ಕ್ಲಬ್ ಆಗುಂಬೆಯ ವೀಣಾ ಭಟ್, ಅರುಣ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರು,ಶಿಕ್ಷಕರು, ಶಾಲಾ ಮಕ್ಕಳು, ಪೋಷಕರು ಹಾಗೂ ಹಳೆ ವಿದ್ಯಾರ್ಥಿ ಜ್ಯೋತಿ ಉದಯ್ ಕುಮಾರ್ ಭಾಗವಹಿಸಿದ್ದರು.

ಹಂಚಿಕೊಳ್ಳಿ: