ಕುಡಿಯುವ ನೀರಿಗೂ ಪರದಾಟ; ಕೆರೆಯ ಕಲುಷಿತ ನೀರೇ ಆಧಾರ, 29 ಕುಟುಂಬಗಳ ಗೋಳು ಕೇಳೋರಿಲ್ಲ
ಮಡಿಕೇರಿ: ಬಡವರಿಗೆ ಸೂರು ಕಲ್ಪಿಸಬೇಕು, ಪ್ರತಿಯೊಬ್ಬರಿಗೂ (Kodagu) ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪ...

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪೊನ್ನತ್ ಮೊಟ್ಟೆ ಗ್ರಾಮದ ಸರ್ಕಾರಿ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವ 29 ಕುಟುಂಬಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇಲ್ಲಿನ ಬಾವಿ ಬತ್ತಿ ಹೋಗಿರುವ ಕಾರಣ ನಿವಾಸಿಗಳು ಅನಿವಾರ್ಯವಾಗಿ ಕೆರೆಯ ನೀರನ್ನು ಬಳಸುತ್ತಿದ್ದು, ಇದರಿಂದ ಮಕ್ಕಳಲ್ಲಿ ಚರ್ಮರೋಗ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಕೆಲವು ವರ್ಷಗಳಿಂದ ನಿವೇಶನ ಮತ್ತು ಸೂರು ಕಲ್ಪಿಸುವಂತೆ ಹೋರಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಕುಟುಂಬಗಳು, ಸಮಸ್ಯೆ ಬಗೆಹರಿಯದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿವೆ.




