ಸೈಬರ್ ವಂಚನೆ ತಡೆಗೆ ಎಚ್ಚರ ಅಗತ್ಯ: ಇನ್ಸ್ಪೆಕ್ಟರ್ ರಾಜೇಂದ್ರ ಕುಮಾರ್
ಮೂಡುಬಿದಿರೆ: ಡಿಜಿಟಲ್ ತಂತ್ರಜ್ಞಾನವು ಮಾನವ ಬದುಕನ್ನು ಸುಗಮಗೊಳಿಸಿರುವಂತೆಯೇ, ಅದರ ದುರ್ಬಳಕೆಯಿಂದ ಸೈಬರ್ ಅಪರಾಧಗಳ ಜಾಲವೂ ವ್ಯಾಪಕವಾಗುತ್ತಿದೆ. ಆನ್ಲೈನ್ ವಂಚನೆ, ನಕಲಿ ಕರೆಗಳು, ಅಪರಿಚಿತ ಲಿಂಕ್ಗಳು ಹಾಗೂ ಸಾಮಾಜಿ...

ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸೈಬರ್ ಅಪರಾಧಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ಕುಮಾರ್, ತಂತ್ರಜ್ಞಾನದ ದುರ್ಬಳಕೆಯಿಂದ ಸೈಬರ್ ವಂಚನೆಗಳು ಹೆಚ್ಚುತ್ತಿದ್ದು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು. ಆನ್ಲೈನ್ ವಹಿವಾಟು, ಒಟಿಪಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎಂದು ಅವರು ಎಚ್ಚರಿಸಿದರು. ಸೈಬರ್ ವಂಚನೆಗೆ ಒಳಗಾದಾಗ ಮುಜುಗರ ಪಡದೆ ತಕ್ಷಣವೇ ಪೊಲೀಸರಿಗೆ ದೂರು ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಬ್ಇನ್ಸ್ಪೆಕ್ಟರ್ ಪ್ರತಿಭಾ, ಪ್ರಾಂಶುಪಾಲ ಪುಷ್ಪರಾಜ್ ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.




