ದೆಹಲಿ ಅಗ್ನಿ ಅವಘಡ: ಮೊದಲ ಮಹಡಿಯಿಂದ ಮಗುವನ್ನು ಎಸೆದು ರಕ್ಷಿಸಿದ ವ್ಯಕ್ತಿ
ನವದೆಹಲಿ: ಈಶಾನ್ಯ ದೆಹಲಿಯ ಮೌಜ್ಪುರ ಪ್ರದೇಶದ ರೆಸ್ಟೋರೆಂಟ್ನಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ, ಮಗುವಿನ ಜೀವ ಉಳಿಸಲು ವ್ಯಕ್ತಿಯೊಬ್ಬರು ಮೊದಲ ಮಹಡಿಯ ಕಿಟಕಿಯಿಂದ ಮಗುವನ್ನು ಹೊರಗೆಸೆದ ದೃಶ್...

ಈಶಾನ್ಯ ದೆಹಲಿಯ ಮೌಜ್ಪುರದಲ್ಲಿರುವ ಉಧಮ್ ಫಿಶ್ ಪಾಯಿಂಟ್ ರೆಸ್ಟೋರೆಂಟ್ನಲ್ಲಿ ಮಂಗಳವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯಿಂದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬರು ಮೊದಲ ಮಹಡಿಯಿಂದ ಮಗುವನ್ನು ಕೆಳಕ್ಕೆ ಎಸೆದಿದ್ದು, ಸ್ಥಳದಲ್ಲಿದ್ದವರು ಅದನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ನಿಯಂತ್ರಿಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




