ಮುಖ್ಯ ವಿಷಯಕ್ಕೆ ಹೋಗಿ
The Karnataka Today
14 Oct
ಸುದ್ದಿ
ಕರ್ನಾಟಕ

ತೆಲಂಗಾಣ: ₹10ರ 12,300 ನಾಣ್ಯ ನೀಡಿ ₹1.23 ಲಕ್ಷದ ಸ್ಕೂಟಿ ಖರೀದಿಸಿದ ವ್ಯಕ್ತಿ

ಚಿಲ್ಲರೆ ನಾಣ್ಯಗಳನ್ನು ಕಂಡರೆ ಅಲಕ್ಷಿಸುವವರೇ ಹೆಚ್ಚು. ಆದರೆ, ಅದೇ ನಾಣ್ಯಗಳನ್ನು ಕೂಡಿಟ್ಟು ವ್ಯಕ್ತಿಯೊಬ್ಬರು ಹೊಸ ವಾಹನ ಖರೀದಿಸಿದ್ದಾರೆ ಎಂದರೆ ನಂಬುತ್ತೀರಾ? ತೆಲಂಗಾಣದ ಬಾಸಾರಿ ರವಿ ಜೋಸೆಫ್ ಎಂಬುವರು ₹10 ನಾಣ್ಯಗಳ...

₹10ರ ನಾಣ್ಯಗಳಲ್ಲೇ ₹1.23 ಲಕ್ಷದ ಸ್ಕೂಟಿ ಖರೀದಿಸಿದ ವ್ಯಕ್ತಿ: ಸಿಬ್ಬಂದಿ ಬೆರಗು
ಹಂಚಿಕೊಳ್ಳಿ:

ತೆಲಂಗಾಣದ ಲಕ್ಷೆಟ್ಟಿಪೇಟೆಯ ನಿವಾಸಿ ಬಾಸಾರಿ ರವಿ ಜೋಸೆಫ್ ಅವರು ಸುಮಾರು 12,300 ನಾಣ್ಯಗಳನ್ನು ನೀಡಿ ಹೊಸ ಸ್ಕೂಟರ್ ಖರೀದಿಸುವ ಮೂಲಕ ಗಮನ ಸೆಳೆದಿದ್ದಾರೆ. ಪಾದ್ರಿಯಾಗಿರುವ ಇವರು ಕಳೆದ ಮೂರು ವರ್ಷಗಳಿಂದ ತಲಾ ₹10 ಮುಖಬೆಲೆಯ ನಾಣ್ಯಗಳನ್ನು ಉಳಿತಾಯ ಮಾಡಿದ್ದರು. ಒಟ್ಟು ₹1.23 ಲಕ್ಷ ಮೌಲ್ಯದ ನಾಣ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಜಗದಂಬಾ ಹೋಂಡಾ ಶೋ ರೂಂಗೆ ಹೋದಾಗ, ಸಿಬ್ಬಂದಿ ಎರಡು ಗಂಟೆಗಳ ಕಾಲ ಶ್ರಮಪಟ್ಟು ಹಣವನ್ನು ಎಣಿಕೆ ಮಾಡಿದರು. ನಾಣ್ಯಗಳ ಮೂಲಕವೇ ವಾಹನ ಖರೀದಿಸಿದ ಇವರ ವಿಶಿಷ್ಟ ಉಳಿತಾಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಂಚಿಕೊಳ್ಳಿ: