$75,000 ಡಾಲರ್ಗೆ ಮಾರಾಟವಾದ ಹಾಲಿವುಡ್ ನಟನ ಕಿಡ್ನಿ ಸ್ಟೋನ್! 10 ವರ್ಷದ ಬಳಿಕ ಸತ್ಯ ಬಾಯ್ಬಿಟ್ಟ ವಿಲಿಯಂ ಶಾಟ್ನರ್
ಹಾಲಿವುಡ್ ನಟ ವಿಲಿಯಂ ಶ್ಯಾಟ್ನರ್ ಅವರ ಕಿಡ್ನಿ ಕಲ್ಲೊಂದು 2006ರಲ್ಲಿ 75,000 ಡಾಲರ್ಗೆ ಹರಾಜಾಗಿತ್ತು. ಈ ಹರಾಜಿನಿಂದ ಬಂದ ಹಣ ಹಾಗೂ ಸಹನಟರ ದೇಣಿಗೆಯನ್ನು ಸೇರಿಸಿ ಅವರು ವಸತಿಹೀನರಿಗೆ ಐದು ಮನೆಗಳನ್ನು ಕಟ್ಟಿಸಿಕೊಟ್ಟ...

ಹಾಲಿವುಡ್ ನಟ ವಿಲಿಯಂ ಶ್ಯಾಟ್ನರ್ ತಮ್ಮ ಕಿಡ್ನಿಯಿಂದ ತೆಗೆದ ಕಲ್ಲನ್ನು 75,000 ಡಾಲರ್ಗೆ ಹರಾಜು ಹಾಕುವ ಮೂಲಕ ಸುದ್ದಿಯಾಗಿದ್ದಾರೆ. 2006ರಲ್ಲಿ ನಡೆದ ಈ ಘಟನೆಯನ್ನು ನಟ ಇತ್ತೀಚೆಗೆ ಯೂಟ್ಯೂಬ್ ಶೋ ಒಂದರಲ್ಲಿ ಬಹಿರಂಗಪಡಿಸಿದ್ದಾರೆ. ಗ್ಯಾಂಬ್ಲಿಂಗ್ ಕಂಪನಿಯೊಂದು ಪ್ರಚಾರಕ್ಕಾಗಿ ಈ ಕಲ್ಲನ್ನು ಖರೀದಿಸಿತ್ತು. ಈ ಹಣದೊಂದಿಗೆ ಸಹನಟರ ದೇಣಿಗೆಯನ್ನು ಸೇರಿಸಿ ಒಟ್ಟು 1 ಲಕ್ಷ ಡಾಲರ್ ಸಂಗ್ರಹಿಸಿದ ಶ್ಯಾಟ್ನರ್, ಲೂಸಿಯಾನದಲ್ಲಿ ಐದು ಮನೆಗಳನ್ನು ನಿರ್ಮಿಸಿ ಬಡ ಕುಟುಂಬಗಳಿಗೆ ನೀಡಿದ್ದಾರೆ.




