ಹೆಬ್ರಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸರ್ವಸದಸ್ಯರ ಸಭೆ.
ಹೆಬ್ರಿ: ಹೆಬ್ರಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸರ್ವಸದಸ್ಯರ ಸಭೆಯು ಇತ್ತೀಚೆಗೆ ಹೆಬ್ರಿಯ ಶ್ರೀರಾಮ ಮಂಟಪದಲ್ಲಿ ಅಧ್ಯಕ್ಷ ಎಚ್. ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಯ ಕಳೆದ...

ಹೆಬ್ರಿ: ಹೆಬ್ರಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸರ್ವಸದಸ್ಯರ ಸಭೆಯು ಇತ್ತೀಚೆಗೆ ಹೆಬ್ರಿಯ ಶ್ರೀರಾಮ ಮಂಟಪದಲ್ಲಿ ಅಧ್ಯಕ್ಷ ಎಚ್. ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಕಳೆದ ಸಾಲಿನಲ್ಲಿ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿ ರೈತ ಸದಸ್ಯರಿಗೆ ನೇರವಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ಕೃಷಿ ಮತ್ತು ತೋಟಗಾರಿಕಾ ಪರಿಕರಗಳನ್ನು ಗುಣಮಟ್ಟದೊಂದಿಗೆ ಕೈಗೆಟುಕುವ ದರದಲ್ಲಿ ಒದಗಿಸುತ್ತೇವೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಹಾಗೂ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯ ಚಟುವಟಿಕೆ ಮಾಡುತ್ತದೆ ಎಂದು ಅಧ್ಯಕ್ಷ ಸುರೇಶ ಶೆಟ್ಟಿ ಶಿವಪುರ ಹೇಳಿದರು.
ಸಿಇಒ ಹರೀಶ್, ನಿರ್ದೇಶಕರಾದ ಕೆ. ಜಗದೀಶ್ ಹೆಬ್ಬಾರ್, ಜ್ಯೋತಿ ಹರೀಶ್, ವಿಶ್ವನಾಥ ಹೆಗ್ಡೆ, ಶ್ರೀಕಾಂತ್ ಆಚಾರ್ಯ ಶಿವಪುರ, ರಾಜೇಶ್ ಪೂಜಾರಿ ಚಾರ, ಸತ್ಯರಂಜನ್ ಶೆಟ್ಟಿ ಉಪಸ್ಥಿತರಿದ್ದರು.
ಜ್ಯೋತಿ ಹರೀಶ್ ಸ್ವಾಗತಿಸಿದರು. ಸೀತಾರಾಮ್ ಹೆಬ್ಬಾರ್ ವಂದಿಸಿದರು. ಹರೀಶ್ ಶಿವಪುರ ನಿರೂಪಿಸಿದರು.




