ಅನ್ನಸೇವೆ ಆ್ಯಪ್ ನಾಳೆಯಿಂದ ರಾಜ್ಯಾದ್ಯಂತ ಲಭ್ಯ; ಅ.20ರೊಳಗೆ e-KYC ಕಡ್ಡಾಯ
ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳಿಗೆ ಸಿಹಿಸುದ್ದಿ. ಫಲಾನುಭವಿಗಳು ಮನೆಯಲ್ಲೇ ಕುಳಿತು e-KYC ಮಾಡಿಕೊಳ್ಳಲು ಅನುಕೂಲವಾಗುವ ‘ಅನ್ನಸೇವೆ’ ಮೊಬೈಲ್ ಆ್ಯಪ್ ಅಕ್ಟೋಬರ್ 14ರಿಂದ ರಾ...

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ತಮ್ಮ ಮನೆಯಿಂದಲೇ ಇ-ಕೆವೈಸಿ ಮಾಡಿಕೊಳ್ಳಲು ಅನುಕೂಲವಾಗುವ ಅನ್ನಸೇವೆ ಆ್ಯಪ್ ಅಕ್ಟೋಬರ್ 14ರಿಂದ ರಾಜ್ಯದಾದ್ಯಂತ ಲಭ್ಯವಾಗಲಿದೆ. ಈ ಆ್ಯಪ್ ಮೂಲಕ ಯುಐಡಿಎಐ ಫೇಸ್ ಅಥೆಂಟಿಕೇಶನ್ ಬಳಸಿ ಅಕ್ಟೋಬರ್ 20ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಸೂಚಿಸಿದ್ದಾರೆ. ಈ ಹಿಂದೆ ಇ-ಕೆವೈಸಿ ಮಾಡಿಸಿದವರೂ ಸಹ ಈ ಬಾರಿ ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ. ವಲಸೆ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ಈ ವ್ಯವಸ್ಥೆಯನ್ನು ಎನ್ಐಸಿ ಮತ್ತು ಇ-ಆಡಳಿತ ಇಲಾಖೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.




