ಉಡುಪಿ: ಮಲ್ಪೆ ಶಿಪ್‌ಯಾರ್ಡ್‌ನಲ್ಲಿ ನಾರ್ವೆಗಾಗಿ ನಿರ್ಮಿಸಿದ ಬೃಹತ್ ಹಡಗು ವಿಲ್ಸನ್ ಎನರ್ಜಿ 1
ಉಡುಪಿಯ ಮಲ್ಪೆಯಲ್ಲಿರುವ 'ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್' ನಾರ್ವೆ ದೇಶದ ಸಂಸ್ಥೆಗಾಗಿ ತನ್ನ ಇತಿಹಾಸದಲ್ಲೇ ಅತ್ಯಂತ ಬೃಹತ್ ಸರಕು ಹಡಗನ್ನು ನಿರ್ಮಿಸಿದೆ. ₹1,041 ಕೋಟಿ ಮೌಲ್ಯದ ಒಪ್ಪಂದದ ಭಾಗವಾಗಿ ನಿರ್ಮಾಣ...

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಾರ್ವೆಯ ವಿಲ್ಸನ್ ಎಎಸ್‌ಎ ಸಂಸ್ಥೆಗಾಗಿ 99 ಮೀಟರ್ ಉದ್ದದ ವಿಲ್ಸನ್ ಎನರ್ಜಿ 1 ಎಂಬ ಸರಕು ಹಡಗನ್ನು ನಿರ್ಮಿಸಿದೆ. ₹1,041 ಕೋಟಿ ಮೌಲ್ಯದ ಒಪ್ಪಂದದಡಿ ತಯಾರಾದ ಈ ಹಡಗು 6,300 ಡೆಡ್‌ವೇಟ್ ಟನ್ ಸಾಮರ್ಥ್ಯವನ್ನು ಹೊಂದಿದೆ. ಡೀಸೆಲ್-ಎಲೆಕ್ಟ್ರಿಕ್ ತಂತ್ರಜ್ಞಾನ ಹೊಂದಿರುವ ಈ ನೌಕೆಯನ್ನು ಕೊನೊಶಿಪ್ ಇಂಟರ್ನ್ಯಾಷನಲ್ ಬಿವಿ ವಿನ್ಯಾಸಗೊಳಿಸಿದೆ. ವಿಲ್ಸನ್ ಎಎಸ್‌ಎ ಅಧ್ಯಕ್ಷ ಈವಿಂಡ್ ಈಡೆಸ್‌ವಿಕ್ ಅವರು ಹಡಗನ್ನು ನೀರಿಗಿಳಿಸಿದರೆ, ಭಾರತದಲ್ಲಿನ ನಾರ್ವೆ ರಾಯಭಾರಿ ಮೇ-ಎಲಿನ್ ಸ್ಟೆನರ್ ಮತ್ತೊಂದು ಹಡಗಿನ ತಳಪಾಯ ಹಾಕಿದರು. 2028ರೊಳಗೆ ಒಟ್ಟು 8 ಹಡಗುಗಳನ್ನು ಪೂರೈಸುವ ಗುರಿಯನ್ನು ಶಿಪ್‌ಯಾರ್ಡ್ ಹೊಂದಿದೆ.




