ಯೋಧರ ಮನೆಯಂಗಳದಲ್ಲಿ ದೀಪಾವಳಿ ಕಾಪು ಹಿಂದುಳಿದ ವರ್ಗ ಬಿಜೆಪಿ ಮೋರ್ಚಾವತಿಯಿಂದ ವಿಶಿಷ್ಟ ಸಂಭ್ರಮಾಚರಣೆ ಸಂತೋಷ್ ಮೂಡುಬೆಳ್ಳೆ
ದೀಪಾವಳಿಯ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕು ಎನ್ನುವ ಬಿಜೆಪಿ ಕಾಪು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಸಂತೋಷ ಮೂಡುಬೆಳ್ಳೆ ಯವರ ವಿಶಿಷ್ಟ ಆಲೋಚನೆ ಕಾರ್ಯಕ್ರಮವೇ ಯೋಧರ ಮನೆಯಂಗಳದಲ್ಲಿ ದೀಪಾವಳಿ ಸಂಭ್ರಮಾಚರಣೆ

ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮವು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಜರುಗಿತು.

ಮೂಡುಬೆಳ್ಳಿಯ ತಿರ್ಲಪಲ್ಕೆ ನಿವಾಸಿ ಯೋಧ ರವೀಂದ್ರ ಎಸ್. ಬೆಳ್ಳೆ ಅವರ ಮನೆಯಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸೈನಿಕರಾದ ರವೀಂದ್ರ ಎಸ್. ಬೆಳ್ಳೆ, ಸುಜಿತ್ ಪೂಜಾರಿ ಕಾರ್ಕಳ ಹಾಗೂ ಮೋಹನ್ ದಾಸ್ ಮೂಳೂರು ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾಪು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಮೂಡುಬೆಳ್ಳೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಮಾಜಿ ಉಪಾಧ್ಯಕ್ಷ ಶಶಿಧರ್ ವಾಗ್ಲೆ, ಕಟ್ಟಿಂಗೇರಿ ಶಕ್ತಿ ಕೇಂದ್ರದ ಪ್ರಮುಖ್ ಗುರುರಾಜ್ ಭಟ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಾಲಕೃಷ್ಣ ರಾವ್, ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್, ಸುರೇಖಾ ಶೈಲೇಶ್ ಹಾಗೂ ಚಲನಚಿತ್ರ ನಟಿ ಬಾಸುಮಾ ಕೊಡಗು ಉಪಸ್ಥಿತರಿದ್ದರು.

ದೇಶ ಕಾಯುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಈ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಸೈನಿಕರ ಕುಟುಂಬಕ್ಕೆ ಗೌರವ ಮತ್ತು ಅಭಿಮಾನ ಸಲ್ಲಿಸಲಾಯಿತು. 🇮🇳




