ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಲಖನೌ: 2027ರ ಉತ್ತರ ಪ್ರದೇಶ ಚುನಾವಣೆಗಾಗಿ ಒವೈಸಿ ಹಾಗೂ ಆಜಾದ್ ಮೈತ್ರಿ

ಉತ್ತರ ಪ್ರದೇಶ ಚುನಾವಣೆಗೆ ಒವೈಸಿ ಮತ್ತು ಚಂದ್ರಶೇಖರ್ ಆಜಾದ್ ಮೈತ್ರಿ ಮಾಡಿಕೊಂಡಿದ್ದು, ಶೋಷಿತ ವರ್ಗಗಳಿಗೆ ರಾಜಕೀಯ ಶಕ್ತಿ ನೀಡಲು 'ಸಾಮಾಜಿಕ ಪರಿವರ್ತನ್ ಮೋರ್ಚಾ' ರಚಿಸಿದ್ದಾರೆ.

UP ಚುನಾವಣೆ 2027: ಒವೈಸಿ– ಆಜಾದ್ ಮೈತ್ರಿ, 'ಸಾಮಾಜಿಕ ಪರಿವರ್ತನ್ ಮೋರ್ಚಾ' ರಚನೆ
ಹಂಚಿಕೊಳ್ಳಿ:

2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹಾಗೂ ಆಜಾದ್ ಸಮಾಜ್ ಪಾರ್ಟಿಯ ಚಂದ್ರಶೇಖರ್ ಆಜಾದ್ ಅವರು ಸಾಮಾಜಿಕ ಪರಿವರ್ತನ್ ಮೋರ್ಚಾ ಎಂಬ ಹೊಸ ಮೈತ್ರಿಕೂಟವನ್ನು ರಚಿಸಿದ್ದಾರೆ. ಲಖನೌನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮೈತ್ರಿಯನ್ನು ಘೋಷಿಸಲಾಗಿದ್ದು, ಬಿಜೆಪಿ ಅಧಿಕಾರದಿಂದ ದೂರವಿಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಮಾಜದ ಹಿಂದುಳಿದ ಹಾಗೂ ಶೋಷಿತ ವರ್ಗಗಳಿಗೆ ರಾಜಕೀಯ ಅಧಿಕಾರ ಕಲ್ಪಿಸುವುದು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ಈ ಮೈತ್ರಿಯ ಗುರಿಯಾಗಿದೆ ಎಂದು ಆಜಾದ್ ತಿಳಿಸಿದ್ದಾರೆ. ಇತರ ಪಕ್ಷಗಳು ಕೂಡ ಈ ವೇದಿಕೆಗೆ ಸೇರಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಹಂಚಿಕೊಳ್ಳಿ: