ನಾಗ್ಪುರದ ರಾಮ್‌ಟೆಕ್‌ನಲ್ಲಿ ಹೊಸ ಅಭಿವೃದ್ಧಿ ಮಾದರಿ ಬಗ್ಗೆ ಮೋಹನ್ ಭಾಗವತ್ ಪ್ರತಿಪಾದನೆ
ನಾಗ್ಪುರ: ಇಡೀ ಜಗತ್ತು ಪರಿಹಾರಕ್ಕಾಗಿ ಭಾರತದತ್ತ ಎದುರು ನೋಡುತ್ತಿದೆ. ಹಾಗಾಗಿ ಭಾರತವು ತನ್ನ ಸಾಂಪ್ರದಾಯಿಕ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡು ಜಗತ್ತಿಗೆ ಹೊಸ ಅಭಿವೃದ್ಧಿ ಮಾದರಿಯನ್ನು ಪರಿಚಯಿಸಬೇಕು ಎಂದು ಆರ್‌ಎ...

ನಾಗ್ಪುರ ಜಿಲ್ಲೆಯ ರಾಮ್‌ಟೆಕ್‌ನಲ್ಲಿ ದತ್ತಾ ಮೇಘೆ ಫೌಂಡೇಶನ್‌ನ ಕಾಲೇಜು ಉದ್ಘಾಟಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಜಗತ್ತಿಗೆ ಭಾರತವು ತನ್ನ ಸಾಂಪ್ರದಾಯಿಕ ಜ್ಞಾನದ ಮೂಲಕ ಹೊಸ ಅಭಿವೃದ್ಧಿ ಮಾದರಿಯನ್ನು ನೀಡಬೇಕಿದೆ ಎಂದಿದ್ದಾರೆ. ಪ್ರಕೃತಿಯನ್ನು ಮನುಷ್ಯನು ಆಳುವ ಬದಲು ಅದರ ಒಂದು ಭಾಗವಾಗಿ ಬದುಕಬೇಕು ಎಂದು ಅವರು ತಿಳಿಸಿದ್ದಾರೆ. ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯ ಪರಸ್ಪರ ಬೆಸೆದುಕೊಂಡಿದ್ದು, ಎಲ್ಲರ ಒಳಿತನ್ನು ಬಯಸುವ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ಈ ಕಾರ್ಯಕ್ರಮದಲ್ಲಿ ನಿತೀನ್ ಗಡ್ಕರಿ ಮತ್ತು ದೇವೇಂದ್ರ ಫಡಣವೀಸ್ ಉಪಸ್ಥಿತರಿದ್ದರು.




