ಉಡುಪಿಯಲ್ಲಿ 285 ಲಕ್ಷ ರೂ. ವೆಚ್ಚದ ನೂತನ ಎಫ್ಎಂ ರೇಡಿಯೋ ಕೇಂದ್ರಕ್ಕೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ
ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಶುಕ್ರವಾರ ಬೆಳಗ್ಗೆ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಉಡುಪಿ ಅಜ್ಜರಕಾಡಿನ ನೂತನ ಎಫ್ಎಂ ರೇಡಿಯೋ ಸ್ಟೇಷನ್ ಬಿಡುಗಡೆ...

ಉಡುಪಿಯಲ್ಲಿ ನಿರ್ಮಿಸಲಾಗಿರುವ 1 ಕಿಲೋ ವ್ಯಾಟ್ ಸಾಮರ್ಥ್ಯದ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರವನ್ನು ಶುಕ್ರವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಲಿದ್ದಾರೆ. 285 ಲಕ್ಷ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿರುವ ಈ ಕೇಂದ್ರವು 30 ಕಿ.ಮೀ ವ್ಯಾಪ್ತಿಯಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳನ್ನು ತಲುಪಿಸಲಿದೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ವಿಶೇಷ ಮುತುವರ್ಜಿಯಿಂದ ಈ ಯೋಜನೆ ಸಾಕಾರಗೊಂಡಿದ್ದು, ಇದು ತುರ್ತು ಸಂದರ್ಭಗಳಲ್ಲಿ ಸಂವಹನಕ್ಕೆ ಸಹಕಾರಿಯಾಗಲಿದೆ. ಸಚಿವರು ಅಂದು ಬೆಳಗ್ಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಅಜ್ಜರಕಾಡಿನ ಈ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.




