ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರಾವಳಿ

ಮಂಗಳೂರಿನಲ್ಲಿ 300 ಗಂಟೆಗಳ ನಿರಂತರ ಕೊಂಕಣಿ ಗಾಯನ ಗಿನ್ನೆಸ್ ದಾಖಲೆಯತ್ತ

ಮಾಂಡ್ ಸೊಭಾಣ್ ಸಂಸ್ಥೆಯ ರೂಬಿ ಜುಬಿಲಿ ಅಂಗವಾಗಿ ಮಂಗಳೂರಿನಲ್ಲಿ ನಡೆಯುತ್ತಿರುವ 300 ಗಂಟೆಗಳ ಕೊಂಕಣಿ ಗಾಯನ ಮಾರಾಥಾನ್ 35 ಗಂಟೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನದಲ್ಲಿ ಈಗಾಗಲೇ...

· ದಕ್ಷಿಣ ಕನ್ನಡ
ಮಂಗಳೂರಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಸುದೀರ್ಘ 300 ಗಂಟೆಗಳ ಮ್ಯಾರಥಾನ್‌ ಗಾಯನ 36 ಗಂಟೆ ಯಶಸ್ವಿ
ಹಂಚಿಕೊಳ್ಳಿ:

ಮಂಗಳೂರಿನ ಟೌನ್ ಹಾಲ್‌ನಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯು ಆಯೋಜಿಸಿರುವ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದಲ್ಲಿ 300 ಗಂಟೆಗಳ ದೀರ್ಘಾವಧಿಯ ಗಾಯನ ಮ್ಯಾರಥಾನ್ ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮವು ಈಗಾಗಲೇ 35 ಗಂಟೆಗಳ ಗಾಯನವನ್ನು ಪೂರೈಸಿದ್ದು, ಗಿನ್ನೆಸ್ ವಿಶ್ವ ದಾಖಲೆಯ ಗುರಿಯನ್ನು ಹೊಂದಿದೆ. ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವಿವಿಧ ಭಾಗಗಳಿಂದ ಆಗಮಿಸಿರುವ 35 ಸಂಗೀತ ತಂಡಗಳು ಈಗಾಗಲೇ ತಮ್ಮ ಪ್ರದರ್ಶನ ನೀಡಿವೆ. ಒಟ್ಟು 12 ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಯಾವುದೇ ಹಾಡು ಅಥವಾ ಗಾಯಕರ ಪುನರಾವರ್ತನೆಯಿಲ್ಲದೆ ನಿರಂತರವಾಗಿ ಕಲೆ ಪ್ರಸ್ತುತಪಡಿಸಲಾಗುತ್ತಿದೆ.

ಹಂಚಿಕೊಳ್ಳಿ: